ಮೂಡಿಗೆರೆ :ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಲ್ಲಿ ಬೈಲ್ ವೃತ್ತದಲ್ಲಿ ಒಣ ಗಾಂಜಾ ಪತ್ತೆ.
ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ 43 ಗ್ರಾಂ ಗಾಂಜಾವನ್ನು ಮೂಡಿಗೆರೆ ಅಬಕಾರಿ ಪೊಲೀಸರು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಬಿಳುಗುಳ ಗ್ರಾಮದ ಆಲ್ಬರ್ಟ್ ಡಿಸೋಜ ಬಿನ್ ಫ್ರಾನ್ಸಿಸ್ ಡಿಸೋಜ ಎಂದು ಗುರುತಿಸಲಾಗಿದೆ.
ಆರೋಪಿಯನ್ನು ಬಂಧಿಸಿ ಪ್ರಕರಣ
ದಾಖಲು ಮಾಡಲಾಗಿದೆ.
ದಾಳಿ ನಡೆಸಿದ ಅಬಕಾರಿ ಉಪ ವಿಭಾಗದ ನಿರೀಕ್ಷಕರಾದ ಲೋಕೇಶ್, ಸಿಬ್ಬಂದಿಗಳಾದ ಮುಖ್ಯ ಪೇದೆ ಸಂತೋಷ್, ಅಬಕಾರಿ ಪೇದೆಗಳಾದ ಬಸವರಾಜು ಬಂಗಾರಿ, ಶಂಕರ್ ಗುರುವ, ಹಾಗೂ ಚಾಲಕ ಪ್ರಸನ್ನ ಕುಮಾರ್ ಇದ್ದರು.