ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಬಣಕಲ್ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಪಿ ವಾಸುದೇವ್ ಅವರನ್ನು ಬಣಕಲ್ ಫ್ರೆಂಡ್ಸ್ ಕ್ಲಬ್ ಸದಸ್ಯರು ಸನ್ಮಾನಿಸಿದರು ಫ್ರೆಂಡ್ಸ್ ಕ್ಲಬ್ ನ ಗೌರವ ಅಧ್ಯಕ್ಷರಾದ ಪ್ರವೀಣ್ ಗೌಡ ಮಾತನಾಡಿ ಪಿ ವಾಸು ದೇವ್ ಅವರು ಕಳೆದ 30 ವರ್ಷಗಳಿಂದ ಬಣಕಲ್ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅವರ ಮಾರ್ಗದರ್ಶನದಲ್ಲಿ ನಾವುಗಳು ಬೆಳೆದಿದ್ದೇವೆ ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂದವ್ಯ ಹೊಂದಿರುವ ಅವರು ಮಕ್ಕಳ ನೆಚ್ಚಿನ ಶಿಕ್ಷಕರಾಗಿದ್ದಾರೆ ಹಾಗೆ ಶಾಲೆಯಲ್ಲಿ ಸಹ ಶಿಕ್ಷಕರೊಂದಿಗೆ ಆತ್ಮೀಯತೆಯಿಂದ ಬೆರೆಯುವ ಅವರ ನಡವಳಿಕೆಯಿಂದ ಅವರನ್ನು ಎಲ್ಲರೂ ಇಷ್ಟ ಪಡುವ ಶಿಕ್ಷಕರಾಗಿ ಗುರುತಿಸಿದ್ದಾರೆ ಹೀಗೆ ಬಣಕಲ್ ಸುತ್ತ ಮುತ್ತ ಚಿರ ಪರಿಚಿತ ಹೆಸರು ಪಿ ವಾಸುದೇವ್ ಬಣಕಲ್ ಗ್ರಾಮದಲ್ಲಿ ತನ್ನ ಶಾಲೆಯನ್ನು ಹೊರತುಪಡಿಸಿ ಬೇರೆ ಮಕ್ಕಳಿಗೂ ಮಾರ್ಗದರ್ಶನ ನೀಡುತ್ತ ಉತ್ತಮ ಭವಿಷ್ಯ ರೂಪಿಸಲು ಸಹಕಾರಿ ಆಗಿದ್ದಾರೆ ಶಾಲೆಯ ಏಳಿಗೆಗಾಗಿ ಅವರ ಕೊಡುಗೆ ಅಪಾರ ಸದಾ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ರೂಪಿಸುತ್ತ ತಾಲ್ಲೂಕ್ಕಿನಲ್ಲೇ ಶಾಲೆಗೆ ಗೌರವ ತಂದುಕೊಟ್ಟಿದ್ದಾರೆ ಪ್ರತಿ ವರ್ಷ ಶಾಲೆಗೆ ಉತ್ತಮ ಫಲಿತಾಂಶ ದೊರೆಯುವಂತೆ ಮಾಡಲು ಅವರ ಕೊಡುಗೆ ಅಪಾರ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅವರ ಕೊಡುಗೆ ನಿಜಕ್ಕೂ ಪ್ರಶಂಸನೀಯವಾಗಿದೆ ಸರಳ ವ್ಯಕ್ತಿತ್ವದ ವಾಸುದೇವ್ ಸರ್ ರವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಪ್ರಶಸ್ತಿ ಬಂದಿರುವುದು ನಿಜಕ್ಕೂ ಶಾಲೆಗೂ ಹಾಗೂ ಬಣಕಲ್ ನಾಗರಿಕರಿಗೂ ಹೆಮ್ಮೆಯ ವಿಷಯ ಮುಂದೊಂದು ದಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಆಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದರು
ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ ನ ಸದಸ್ಯರಾದ ಪ್ರವೀಣ್, ಅರುಣ್, ಮಧು, ನಿಶಾಂತ್, ಹಸೈನರ್, ಸೂರಿ, ವೀಕ್ಷಕ್ ಹಾಜರಿದ್ದರು