ಹೊಸಹಳ್ಳಿ–ಬಾನಹಳ್ಳಿಯಲ್ಲಿ ನಡೆದ ಉಣ್ಣಕ್ಕಿ ಹುತ್ತದ ಪವಾಡ ಹುಣ್ಣಿಮೆ ಜಾತ್ರಾ ಉತ್ಸವದ ಮರುದಿನ ಬಣಕಲ್ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಭಾರತಿ ಬೈಲ್ ಸೇವಾ ಭಾರತಿ ಸ್ವಯಂಸೇವಕರು ಜಂಟಿಯಾಗಿ ಸ್ವಚ್ಛತಾ ಕಾರ್ಯ ನಡೆಸಿದರು.
ಹುಣ್ಣಿಮೆ ರಾತ್ರಿ ನಡೆದ ಜಾತ್ರಾ ಉತ್ಸವದಲ್ಲಿ ಬಾನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಪಾಲ್ಗೊಂಡಿದ್ದರು. ಜಾತ್ರೆಯ ಅಂಗವಾಗಿ ವಿವಿಧ ಅಂಗಡಿ ಮುಂಗಟ್ಟುಗಳು ತೆರೆದಿದ್ದರಿಂದ ಹೆಚ್ಚಿನ ಜನಸಂದಣಿ ಉಂಟಾಗಿತ್ತು. ಉತ್ಸವದ ಬಳಿಕ ಮೈದಾನದಲ್ಲಿ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯ ವಸ್ತುಗಳು ರಾಶಿಗಟ್ಟಲೆ ಬಿದ್ದಿದ್ದವು.
ಇದನ್ನು ಗಮನಿಸಿದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರುಹಾಗೂ ಭಾರತಿ ಬೈಲ್ ಸೇವಾ ಭಾರತಿ ಸ್ವಯಂ ಸೇವಕರು ಪರಿಸರ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಸ್ವಯಂಪ್ರೇರಿತರಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. ಇದೇ ಸಂದರ್ಭದಲ್ಲಿ ಶೌರ್ಯ ಘಟಕದ ಸ್ವಯಂಸೇವಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸೇವಾ ಕಾರ್ಯದಲ್ಲಿ ಮಾಜಿ ಕ್ಯಾಪ್ಟನ್ ಕೆ.ಎಲ್. ರವಿ, ರವಿ ಎಸ್.ಎನ್., ಅಶೋಕ್ ಕೆ.ಎಸ್., ಹಿರಣ್ಣಯ್ಯ ಕೆ., ಅಜಿತ್ ಕುಮಾರ್, ಜ್ಯೋತಿ ಹಾಗೂ ಮೋಹಿನಿ ಸೇರಿದಂತೆ ಒಟ್ಟು ಏಳು ಮಂದಿ ಸ್ವಯಂಸೇವಕರು ಭಾಗವಹಿಸಿದ್ದರು.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ