ಬಣಕಲ್ ಕಾಂಗ್ರೆಸ್ ಘಟಕಕ್ಕೆ ನೂತನ ಅಧ್ಯಕ್ಷರು ಹಾಗೂ ಬೂತ್ ಅಧ್ಯಕ್ಷರ ನೇಮಕ

ಬಣಕಲ್: ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ವಿವಿಧ ಪ್ರದೇಶಗಳಿಗೆ ನೂತನ ಬೂತ್ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ನೂತನವಾಗಿ ನೇಮಕಗೊಂಡ ಬೂತ್ ಅಧ್ಯಕ್ಷರ ವಿವರ ಇಂತಿದೆ:

1)ಸಬ್ಳಿ – ದೇವರಾಜ್ ಸಬ್ಳಿ
2)ಗುಡ್ಡಟ್ಟಿ – ದಯಾಕರ್
3)ಹೆಗ್ಗುಡ್ಲು – ಸೋಮೇಶ್
4)ಬಣಕಲ್ ವಿಲೇಜ್ – ರೋಹಿತ್
5)ಕೂಡಹಳ್ಳಿ (1) – ದಿಲ್ದಾರ್ ಬೇಗಮ್
6)ಕೂಡಹಳ್ಳಿ (2) – ಅಫ್ರೀದ್ (ಅಪ್ಪಿ)
7)ಬಣಕಲ್ ಟೌನ್ – ನಯಾಜ್ (ಸದ್ದು

ಇದೇ ಸಂದರ್ಭದಲ್ಲಿ ಬಣಕಲ್ ಘಟಕದ ಅಧ್ಯಕ್ಷರನ್ನಾಗಿ ವಿನಯ್ ಕುಮಾರ್ ಸಿ.ಎಸ್. ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೋಬಳಿ ಕಾಂಗ್ರೆಸ್ ಅಧ್ಯಕ್ಷರಾದ ಗುತ್ತಿ ಅರುಣ್ ಅವರು ತಿಳಿಸಿದ್ದಾರೆ.

ನೂತನವಾಗಿ ನೇಮಕಗೊಂಡ ಎಲ್ಲಾ ಬೂತ್ ಅಧ್ಯಕ್ಷರು ಹಾಗೂ ಸದಸ್ಯರ ಸಭೆಯನ್ನು ಮಾನ್ಯ ಶಾಸಕರಾದ ನಯನ ಮೋಟಮ್ಮ ಮತ್ತು ತಾಲೂಕು ಕಾಂಗ್ರೆಸ್ ಅಧ್ಯಕ್ಷರಾದ ರವಿ ಕುನ್ನಳ್ಳಿ ಅವರು ಕರೆದು, ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ಸಿದ್ಧಪಡಿಸಿ ನೀಡುವಂತೆ ಸೂಚಿಸಿದ್ದಾರೆ.

ಶಾಸಕರ ವಿಶೇಷ ಅನುದಾನದಡಿ ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗಾಗಿ 2 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಗುತ್ತಿ ಅರುಣ್ ಅವರು ತಿಳಿಸಿದ್ದಾರೆ.

ನೂತನ ನೇಮಕಾತಿಯಿಂದ ಬಣಕಲ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.
ವರದಿ ✍️:ಸೂರಿ ಬಣಕಲ್