ಬಣಕಲ್: ಮುಹಿದ್ದೀನ್ ಜುಮ್ಮಾ ಮಸ್ಜಿದ್ ಬಣಕಲ್ ಇವರ ವತಿಯಿಂದ ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಸಮಾವೇಶವು ಮಸೀದಿ ಅಂಗಳದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಪ್ರಸಿದ್ಧ ಪ್ರೇರಕ ವಕ್ತಾರರಾದ ಜನಾಬ್ ರಫೀಕ್ ಮಾಸ್ಟರ್, ಮೂಡಿಗೆರೆ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ರಾಜಶೇಖರ್, ಬಣಕಲ್ ಪೊಲೀಸ್ ಠಾಣಾಧಿಕಾರಿಗಳಾದ ಶ್ರೀ ದಿಲೀಪ್ ಕುಮಾರ್, ಚಕ್ಕಮಕ್ಕಿಯ ಖಲಂದರಿಯ ಪ್ರಿನ್ಸಿಪಾಲ್ ಸಫ್ವನ್ ಫೈಜಿ ಹಾಗೂ ಮೂಡಿಗೆರೆಯ ಆರೋಗ್ಯ ಅಧಿಕಾರಿಗಳಾದ ಇಮ್ರಾನ್ ಅವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾದಕ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳು, ಯುವಜನರ ಮೇಲೆ ಬೀರುವ ಪರಿಣಾಮಗಳು ಹಾಗೂ ಸಮಾಜದಲ್ಲಿ ಮಾದಕ ವ್ಯಸನ ತಡೆಗಟ್ಟುವಲ್ಲಿ ಸಾರ್ವಜನಿಕರ ಪಾತ್ರದ ಕುರಿತು ಜನಜಾಗೃತಿ ಮೂಡಿಸಲಾಯಿತು.
[ ಮಾದಕ ವ್ಯಸನ ಮುwಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಆಯೋಜಿಸಲಾದ ಈ ಸಮಾವೇಶದಲ್ಲಿ ಸಾರ್ವಜನಿಕರಿಗೆ ಜಾಗೃತಿ ಸಂದೇಶ ನೀಡಲಾಯಿತು.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ