ವಿಷಯ: ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅವಹೇಳನಕಾರಿ ಹೇಳಿಕೆಗೆ ತೀವ್ರ ಖಂಡನೆ.
ವಿಶ್ವದ ಅತ್ಯಂತ ಜನಪ್ರಿಯ ನಾಯಕ, ಭಾರತದ ಕೋಟ್ಯಂತರ ಜನಸಾಮಾನ್ಯರ ಆಶಾಕಿರಣವಾಗಿರುವ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಬೇಜವಾಬ್ದಾರಿಯುತ ಮತ್ತು ತರಗೆಟ್ಟ ಹೇಳಿಕೆಯನ್ನು ಮೂಡಿಗೆರೆ ತಾಲ್ಲೂಕು ಬಿಜೆಪಿ ಯುವಮೋರ್ಚಾ ತೀವ್ರವಾಗಿ ಖಂಡಿಸುತ್ತದೆ.
ಕಾಂಗ್ರೆಸ್ ಪಕ್ಷವು ಸತತ ಸೋಲುಗಳಿಂದ ಕಂಗೆಟ್ಟು, ರಾಜಕೀಯವಾಗಿ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿಂದ ಈಗ ಹತಾಶೆಯ ಪರಮಾವಧಿಗೆ ತಲುಪಿದೆ. ಪ್ರಧಾನಿ ಮೋದಿಯವರ ಅಭಿವೃದ್ಧಿ ರಾಜಕಾರಣವನ್ನು ಎದುರಿಸಲು ಸಾಧ್ಯವಾಗದೆ, ಅವರ ವೈಯಕ್ತಿಕ ಜೀವನ ಹಾಗೂ ಆರೋಗ್ಯದ ಕುರಿತು ಅತ್ಯಂತ ಕೆಳಮಟ್ಟದ ಹೇಳಿಕೆಗಳನ್ನು ನೀಡುತ್ತಿರುವುದು ಕಾಂಗ್ರೆಸ್ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಹಿರಿಯ ರಾಜಕಾರಣಿಯೊಬ್ಬರಿಂದ ಇಂತಹ ಸಂಸ್ಕಾರಹೀನ ಮಾತುಗಳನ್ನು ದೇಶದ ಜನತೆ ಎಂದಿಗೂ ಕ್ಷಮಿಸುವುದಿಲ್ಲ.
ಪ್ರಧಾನಿ ಮೋದಿಯವರು ಕೇವಲ ಒಂದು ಪಕ್ಷದ ನಾಯಕರಲ್ಲ, ಅವರು 140 ಕೋಟಿ ಭಾರತೀಯರ ಹೆಮ್ಮೆ. ದೇಶವನ್ನು ಜಾಗತಿಕ ಮಟ್ಟದಲ್ಲಿ ಮುನ್ನಡೆಸುತ್ತಿರುವ ನಾಯಕನಿಗೆ ಗೌರವ ನೀಡುವುದನ್ನು ಕಾಂಗ್ರೆಸ್ ಮೊದಲು ಕಲಿಯಬೇಕಿದೆ. ತಮ್ಮ ರಾಜಕೀಯ ಲಾಭಕ್ಕಾಗಿ ದೇಶದ ಪ್ರಧಾನಿ ಹುದ್ದೆಯ ಘನತೆಯನ್ನು ಕುಗ್ಗಿಸುತ್ತಿರುವ ಖರ್ಗೆ ಅವರು ತಕ್ಷಣವೇ ದೇಶದ ಜನತೆಯ ಹಾಗೂ ಪ್ರಧಾನಿಯವರ ಕ್ಷಮೆಯಾಚಿಸಬೇಕು.
ಒಂದೊಮ್ಮೆ ಕಾಂಗ್ರೆಸ್ ನಾಯಕರು ತಮ್ಮ ಇಂತಹ ನೀಚ ರಾಜಕೀಯ ಹೇಳಿಕೆಗಳನ್ನು ನಿಲ್ಲಿಸದಿದ್ದರೆ, ಮೂಡಿಗೆರೆ ತಾಲ್ಲೂಕು ಬಿಜೆಪಿ ಯುವಮೋರ್ಚಾ ವತಿಯಿಂದ ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ಮೂಡಿಗೆರೆ ತಾಲೋಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ತಾರೇಶ್ ಜೇನುಬೈಲು ತಿಳಿಸಿದ್ದಾರೆ
.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ