ಬಣಕಲ್ :ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವುದರ ಜತೆಗೆ, ಅವರಲ್ಲಿನ ಹೊಸ ಹೊಸ ಬಗೆಯ ಆವಿಷ್ಕಾರದ ಚಿಂತನೆಗಳನ್ನು ಹೊರಹೊಮ್ಮಿಸುವ ಉದ್ದೇಶದಿಂದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಇನ್ಸ್ಪೈರ್ (ಇನ್ನೊವೇಷನ್ ಇನ್ ಸೈನ್ಸ್ ಪಸ್ರ್ಯೂಟ್ ಫಾರ್ ಇನ್ಸ್ಪೈರ್ಡ್ ರೀಸರ್ಚ್) ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಬಣಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮೋಹಿತ್ ಎಂಬ 6ನೇ ತರಗತಿಯ ವಿದ್ಯಾರ್ಥಿ 2025-2026ನೇ ಸಾಲಿನ ಇನ್ಸ್ಪೈರ್ ಅವಾರ್ಡ್ ಗೆ ಆಯ್ಕೆಯಾಗಿದ್ದಾನೆ.
ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಆವಿಷ್ಕಾರಕ್ಕಾಗಿ ನೀಡುವ ‘ಇನ್ಸ್ಪೈರ್ ಪ್ರಶಸ್ತಿ’ಗೆ ಕರ್ನಾಟಕದ ಅತಿ ಹೆಚ್ಚಿನ ಸಂಖ್ಯೆಯ ಮಕ್ಕಳು ಭಾಜನರಾಗಿದ್ದಾರೆ. ಹೊಸ ಆವಿಷ್ಕಾರದ ಚಿಂತನೆಗಳಿಗಾಗಿ ಒಟ್ಟು 7,179 ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ. ನಗದು ಬಹುಮಾನ ದೊರೆಯಲಿದೆ.
ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ ಶಿಕ್ಷಕವೃಂದ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ