ಇ -ಕೆವೈಸಿ ಮಾಡಿಸಲು ಸರ್ವರ್ ಕಾಟ :ಕೂಲಿ ಕಾರ್ಮಿಕರು ಶಾಲಾ ಮಕ್ಕಳ ಪರದಾಟ

ಕರ್ನಾಟಕದಲ್ಲಿ ರೇಷನ್ ಕಾರ್ಡ್ ಇ-ಕೆವೈಸಿ (e-KYC) ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇ-ಕೆವೈಸಿ ಲಿಂಕ್ ಮಾಡಲು ಬಳಸುವ ಆಹಾರ ಇಲಾಖೆಯ ಸರ್ವರ್ ಪದೇ ಪದೇ ಡೌನ್ ಆಗುತ್ತಿರುವುದರಿಂದ, ಗಂಟೆಗಟ್ಟಲೆ ಕಾದರೂ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿಲ್ಲ.

ಈ ಬಗ್ಗೆ ಬಣಕಲ್ ನ್ಯೂಸ್ ನೊಂದಿಗೆ ಮಾತನಾಡಿದ ಬಣಕಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ್ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರು ಬೆಳಗಿನಿಂದ ಸಂಜೆಯವರೆಗೆ ಸಾಲಿನಲ್ಲಿ ನಿಂತರೂ ಕೆಲಸವಾಗುತ್ತಿಲ್ಲ. ಇದರಿಂದ ದಿನಗೂಲಿ ನೌಕರರು ತಮ್ಮ ಕೆಲಸವನ್ನು ಕಳೆದುಕೊಂಡು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ವಯಸ್ಸಾದವರು, ಅಂಗವಿಕಲರು ಮತ್ತು ಅನಾರೋಗ್ಯ ಪೀಡಿತರು ಕೂಡ ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗಳಿಗೆ ಬಂದು ಬಯೋಮೆಟ್ರಿಕ್ ನೀಡಬೇಕಾಗಿ ಬಂದಿರುವುದು ಜನರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.