ಬಣಕಲ್ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯರಾದ ಡಾ:ಇಕ್ಲಾಸ್ ಅಹ್ಮದ್ ವರ್ಗಾವಣೆ

ಬಣಕಲ್: ಹಲವಾರು ವರ್ಷಗಳ ಕಾಲ ಬಣಕಲ್ ಮತ್ತು ಬೆಟಗೆರೆ ಭಾಗದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಇಕ್ಲಾಸ್ ಅಹ್ಮದ್ ರವರು ಬೇಲೂರು ತಾಲ್ಲೂಕ್ಕಿನ ಪ್ರಾಥಮಿಕ ಅರೋಗ್ಯ ಕೇಂದ್ರ ಅನಿಖೆಗೆ ವರ್ಗಾವಣೆಯಾಗಿರುತ್ತಾರೆ.
ಸುಮಾರು 20ವರ್ಷಗಳ ಕಾಲ ಬಣಕಲ್ ಹಾಗೂ ಬೆಟಗೆರೆ ಭಾಗದಲ್ಲಿ ವೈದ್ಯರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ.

ಬಣಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಮಾಣಿಕ ಸೇವೆಯಿಂದ ಜನರ ಪ್ರೀತಿಗೆ ಪಾತ್ರರಾಗಿದ್ದರು ಡಾ ಇಕ್ಲಾಸ್ ಅಹ್ಮದ್. ಸರ್ಕಾರಿ ಆಸ್ಪತ್ರ ಎಂದರೆ ಅಸಡ್ಡೆ ತೋರಿಸುತ್ತಿದ್ದವರು ಅವರು ನೀಡುತ್ತಿದ್ದ ಚಿಕಿತ್ಸೆಯಿಂದ ಜನರು ಸರ್ಕಾರಿ ಆಸ್ಪತ್ರೆಗೆ ಬರಲು ಪ್ರಾರಂಭಿಸಿದರು. ದಿನಕ್ಕೆ ನೂರಾರು ರೋಗಿಗಳು ಅವರ ಬಳಿ ಚಿಕಿತ್ಸೆ ಪಡೆದು ಹೋಗುತ್ತಿದ್ದರು. ಬೆಳಗ್ಗೆಯಿಂದ ಸಂಜೆ ವರೆಗೂ ಆಸ್ಪತ್ರೆ ರೋಗಿಗಳಿಂದ ಗಿಜುಗಿಡುತಿತ್ತು. ಅವರ ಮೃದು ಸ್ವಭಾವ ಹಾಗೂ ರೋಗಿಗಳೊಂದಿಗೆ ಬೆರೆಯುತ್ತಿದ್ದ ರೀತಿಗೆ ಅವರು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.

ಜನರೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದ ಇಕ್ಲಾಸ್ ಅಹ್ಮದ್ ರವರು ವರ್ಗಾವಣೆ ಗೊಂಡಿರುವುದು ಬಣಕಲ್ ಸುತ್ತಮುತ್ತಲಿನ ಜನರಿಗೆ ಬೇಸರ ತರಿಸಿದೆ. ಅವರು ಪ್ರಾಮಾಣಿಕ ಸೇವೆಯಿಂದ ಜನ ಮನ್ನಣೆ ಗಳಿಸಿದ್ದರು.ಇದೆ ರೀತಿ ಅವರ ಮುಂದಿನ ವೃತ್ತಿ ಜೀವನ ಸುಖಕರವಾಗಿರಲಿ ಎಂದು ಗ್ರಾಮಸ್ಥರು ಬಯಸಿದ್ದಾರೆ.

ವರದಿ ✍️ಸೂರಿ ಬಣಕಲ್