ಉರಗತಜ್ಞ ಆರೀಫ್ ಅವರಿಂದ ಕಾಳಿಂಗ ಸರ್ಪ ರಕ್ಷಣೆ


ಬಣಕಲ್ :ವಾಸದ ಮನೆಗೆ ಬಂದಿದ್ದ ಕಾಳಿಂಗ ಸರ್ಪವನ್ನು ಸೆರೆಹಿಡಿದು ಅರಣ್ಯ ಅಧಿಕಾರಿಗಳ ಸಮಕ್ಷಮದಲ್ಲಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟ ಘಟನೆ ತಲಗೂರು ಗ್ರಾಮದಲ್ಲಿ ನಡೆಯಿತು.

ತಲಗೂರಿನ ಮಂಜುನಾಥ್ ಆಚಾರ್ ಎಂಬುವರ ಮನೆಯಲ್ಲಿ ಸೋಮವಾರ ಭಾರಿಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಕೂಡಲೇ ಮನೆಯವರು ಬಣಕಲ್ ನ ಉರಗತಜ್ಞ ಆರೀಫ್ ಅವರಿಗೆ ಕರೆ ಮಾಡಿದ್ದಾರೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಆರೀಫ್ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆಹಿಡಿದಿದ್ದಾರೆ. ಹಾವು ಸುಮಾರು 12ಅಡಿ ಉದ್ದ, 9-10 ಕೆ.ಜಿ ತೂಕವಿದೆ ಎಂದು ಅಂದಾಜಿಸಲಾಗಿದೆ. ಸೆರೆ ಹಿಡಿದ ಹಾವನ್ನುಅರಣ್ಯ ಇಲಾಖೆ ಸಿಬ್ಬಂದಿಯ ಸಮ್ಮುಖದಲ್ಲಿ ಚಾರ್ಮಾಡಿ ಅಭಯಾರಣ್ಯಕ್ಕೆ ಬಿಡಲಾಯಿತು.
ವರದಿ ✍️ಸೂರಿ ಬಣಕಲ್