ಬಣಕಲ್ ನ್ಯೂಸ್ ವತಿಯಿಂದ ನಡೆದ ಬಣಕಲ್ ಡ್ಯಾನ್ಸ್ ಧಮಾಕ ಸೀಸನ್ 1 ಕಾರ್ಯಕ್ರಮಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ

ಬಣಕಲ್ :ಬಣಕಲ್ ನ್ಯೂಸ್ ವತಿಯಿಂದ ನಡೆದ ಬಣಕಲ್ ಡ್ಯಾನ್ಸ್ ಧಮಾಕ ಕಾರ್ಯಕ್ರಮ ಬಣಕಲ್ ನಲ್ಲಿ ಶನಿವಾರ ಯಶಸ್ವಿಯಾಗಿ ನಡೆಯಿತು.
ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ ನೃತ್ಯ ಸ್ಪರ್ದಿಗಳು ತಮ್ಮ ನೃತ್ಯ ಕೌಶಲ್ಯವನ್ನು ಪ್ರದರ್ಶಿಸಿದರು.ಕಾರ್ಯಕ್ರಮ ಯಶಸ್ವಿಯಾಗಿ ಮುಗಿದ ನಂತರ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಬೆಳಗ್ಗೆ 11ಗಂಟೆಗೆ ಬಣಕಲ್ ಚರ್ಚ್ ಹಾಲ್ ನಲ್ಲಿ ಆಯೋಜಿಸಿದ್ದ ಬಣಕಲ್ ಡ್ಯಾನ್ಸ್ ಧಮಾಕ ಕಾರ್ಯಕ್ರಮವನ್ನು ಬಣಕಲ್ ಪಿ.ಎಸ್.ಐ ರೇಣುಕಾ ಉದ್ಘಾಟಸಿ ಮಾತನಾಡಿದರು.
ನೃತ್ಯ ಅನ್ನೋದು
ಭಾವನೆಗಳನ್ನು ವ್ಯಕ್ತ ಪಡಿಸುವ ಭಾಷೆಯಾಗಿದೆ’ ಪ್ರತಿ ಯೊಬ್ಬ ವ್ಯಕ್ತಿಗೂ ಸೂಕ್ತ ಕಲೆಯಿರುತ್ತದೆ.ಅದನ್ನು ಪುಷ್ಟಿ ಕೊಟ್ಟಾಗ ಅದು ಬೆಳಗುತ್ತದೆ.ಪೋಷಕರು ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಬೇಕು.ಬಣಕಲ್ ನ್ಯೂಸ್ ತಂಡ ಈ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ’ಎಂದರು. ಪ್ರಾಧ್ಯಾಪಕ ಡಾ.ಬಿ.ಎನ್.ಲಿತಿನ್ ಮಾತನಾಡಿ’ ಗ್ರಾಮೀಣ ಭಾಗದಲ್ಲಿ ಸ್ಪರ್ಧಾತ್ಮಕ ನೃತ್ಯ ಧಮಾಕ ನಡೆಸುತ್ತಿರುವುದು ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆ.ಆತ್ಮ ವಿಶ್ವಾಸದಿಂದ ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲ್ಲಬೇಕು’ಎಂದರು. ಬಣಕಲ್ ಸಹಕಾರ ಸಂಘದ ನಿರ್ದೇಶಕ ಬಿ.ಎಂ.ಭರತ್ ಮಾತನಾಡಿ’ಮಲೆನಾಡಿನ ಗ್ರಾಮೀಣ ಭಾಗದಲ್ಲಿ ನೃತ್ಯ ಸ್ಪರ್ಧೆಗಳು ನಡೆಯುವುದು ಕಡಿಮೆ.ಆದರೆ ಕ್ರೀಡಾಕೂಟಗಳು ಸಾಮಾನ್ಯವಾಗಿ ನಡೆಯುತ್ತವೆ.ಯುವಕರಾದ ಅರುಣ್ ಪೂಜಾರಿ,ಸೂರಿ,ರಂಗನಾಥ್,ಇಮ್ರಾನ್ ಅವರ ತಂಡ ರಾಜ್ಯ ಮಟ್ಟದ ಸ್ಪರ್ಧೆ ಏರ್ಪಡಿಸಿ ಮಕ್ಕಳನ್ನು ಸ್ಪರ್ಧಾತ್ಮಕವಾಗಿ ಪ್ರೇರೇಪಿಸುತ್ತಿರುವುದು ಊರಿಗೆ ಕೀರ್ತಿ ತಂದಂತೆ’ಎಂದರು. ಮಾಜಿ ತಾ.ಪಂ.ಅಧ್ಯಕ್ಷ ಕೆ.ಸಿ.ರತನ್ ಮಾತನಾಡಿ’ ಮಕ್ಕಳಿಗೆ ಪೋಷಕರು ಮೊಬೈಲ್ ನೀಡದೇ ಅವರ ಹವ್ಯಾಸಿ ಕಲೆಗಳನ್ನು ಗುರುತು ಮಾಡಿ ಅವರಿಗೆ ಉತ್ತಮ ವೇದಿಕೆ ನೀಡಬೇಕು’ಎಂದರು. ಕಾರ್ಯಕ್ರಮದಲ್ಲಿ ಮುಖಂಡರಾದ ಬಿ.ಎಸ್.ನಾರಾಯಣ್ ಗೌಡ,ನೃತ್ಯ ಸಂಯೋಜಕಿ ಬೃಂದಾ ಪ್ರಭಾಕರ್,ಕಾಮಿಡಿ ಕಿಲಾಡಿ ರಮೇಶ್ ಯಾದವ್,ಬಿ.ಎ.ಉಮ್ಮರ್,ಬಣಕಲ್ ಗ್ರಾ.ಪಂ.ಅಧ್ಯಕ್ಷೆ ಝರೀನಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾರಂಭದಲ್ಲಿ ಡಿಕೆಡಿ ಖ್ಯಾತಿಯ ಸದ್ವಿನ್ ಶೆಟ್ಟಿ,ನಿರೂಪಕಿ ಕೀರ್ತಿ, ಮುಖಂಡರಾದ ಕೆ.ಮಧು ಕುಮಾರ್,ಬಿ.ಎಲ್.ದಿವಾಕರ್,ಯತೀಶ್ ಕೂಡಳ್ಳಿ, ಬಿ.ಎಸ್.ವಿಕ್ರಂ,ಸೌಂದತ್ತ್,ಉದ್ಯಮಿ ದಿನೇಶ್ ಶೆಟ್ಟಿ,ನಾಗೇಶ್ ಬಿ.ಎಸ್.ಕಲ್ಲೇಶ್,ಸಬ್ಲಿ ದೇವರಾಜ್,ವೈದ್ಯರಾದ ಡಾ.ಸುಮಂತ್, ಗಂಗಾಧರ,ಡಾ.ಶ್ರೀಲಕ್ಷ್ಮಿ,ಗೌತಮ್,ಶರತ್,ಮನೋಜ್,ಸರೋಜ, ಯಾಕೂಬ್,ಅತೀಕಾ ಭಾನು ಮತ್ತಿತರರು ಇದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ನಡೆದ ನೃತ್ಯ ಸ್ಪರ್ಧೆಯ ಮೂರು ವಿಭಾಗದ ವಿಜೇತ ತಂಡದ ವಿವರ
ಸಬ್ ಜೂನಿಯರ್ ವಿಭಾಗ ದಲ್ಲಿ ಚಿರು ಎಂ ಮೊದಲನೇ ಸ್ಥಾನ ಧೃತಿಕ ದ್ವಿತೀಯ ಸ್ಥಾನ. ಅಥಿತ್ ತೃತೀಯ ಸ್ಥಾನ. ಜೂನಿಯರ್ ವಿಭಾಗದಲ್ಲಿ ರಿಯಾ ಕೋಟ್ಯಾನ್ ಮೊದಲನೇ ಸ್ಥಾನ.
ವರ್ಷ ಆರ್.ಎಸ್. ದ್ವಿತೀಯ ಸ್ಥಾನ. ಸಿ.ಎಂ. ಭೂಮಿಕಾ ತೃತೀಯ ಸ್ಥಾನ
ಗ್ರೂಪ್ ಡ್ಯಾನ್ಸ್ ವಿಭಾಗದಲ್ಲಿ ಶಿವಂ ಡ್ಯಾನ್ಸ್ ಚಿಕ್ಕಮಗಳೂರು.ಪ್ರಥಮ ಸ್ಥಾನ. ಬೀಟ್ ರಾಕರ್ಸ್ ಅಕಾಡೆಮಿ ಬೆಳ್ತಂಗಡಿ, ದ್ವಿತೀಯ ಸ್ಥಾನ. ನಾಟ್ಯ ಕಲಾ ಡ್ಯಾನ್ಸ್ ಸ್ಟುಡಿಯೋ ಸೋಮರ್ ಪೇಟೆ ತೃತೀಯ ಸ್ಥಾನ ಪಡೆದರು.