Screenshot

ಬಣಕಲ್ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಅರ್ಥ ಪೂರ್ಣ ಗುರುವಂದನಾ ಕಾರ್ಯಕ್ರಮ

ಬಣಕಲ್: 2007-08ನೇ ಸಾಲಿನಲ್ಲಿ ಶಿಕ್ಷಣ ಪಡೆದ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಬಣಕಲ್ ಪ್ರೌಢಶಾಲೆಯಲ್ಲಿ ಶನಿವಾರ ನಡೆಯಿತು. ಈ ಕಾರ್ಯಕ್ರಮಕ್ಕೂ ಮುಂಚೆ ಶಾಲೆಯಲ್ಲಿ ತೆಂಗಿನ ಗಿಡಗಳನ್ನು ನೆಡುವುದರ ಮೂಲಕ ಚಾಲನೆ ನೀಡಿದರು.

ಬಣಕಲ್ ಪ್ರೌಢ ಶಾಲೆಯ ಅಧ್ಯಕ್ಷರಾದ ಬಿ.ಎಲ್.ದಿವಾಕರ್ ಅವರ ಅದ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು.

2008ರಲ್ಲಿ ಎಸ್‌ಎಸ್‌ಎಲ್‌ಸಿ ಶಿಕ್ಷಣ ಪಡೆದ ಎಲ್ಲಾ ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಯಲ್ಲಿ ಸೇರಿ, ಅಕ್ಷರ ಕಲಿಸಿದ ಶಿಕ್ಷಕರಿಗೆ ಸನ್ಮಾನಿಸಿದರು. ಹಳೆ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣ, ನೌಕರಿ ಪಡೆದ ಸಂಗತಿಯನ್ನು ಹಂಚಿಕೊಂಡರು.

ಗುರುವಂದನೆ: ನಿವೃತ್ತ ಮುಖ್ಯ ಶಿಕ್ಷಕ ಪಿ ವಾಸುದೇವ್, ಎಂ ಚಂದ್ರ ಶೇಖರ್,ಮುಖ್ಯ ಶಿಕ್ಷಕ ಜಿ.ಎಚ್. ಶ್ರೀನಿವಾಸ್, ವಲ್ಸಮ್ಮ, ಸಿ ಬೋರಕ್ಕ, ಎಚ್. ಸಿ. ಕವಿತಾ, ಡಿ.ಎನ್. ಪ್ರವೀಣ್, ಉಮಾ ಮಹೇಶ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಸೈನಾರ್ ಹಳೆ ವಿದ್ಯಾರ್ಥಿಗೆಳೆಲ್ಲರೂ ಕೂಡಿ ಪಾಠ ಕಲಿಸಿದ ಗುರುಗಳನ್ನು ಮತ್ತು ಗೆಳೆಯರನ್ನು ಒಂದಡೆ ಕೂಡಿಸಿ ಸನ್ಮಾನಿಸುತ್ತಿರುವುದು ಹೃದಯಸ್ಪರ್ಶಿಯಾಗಿದೆ ಎಂದು ಹೇಳಿದರು.
ಈ ಪೈಕಿ ಹಲವರು ತಮ್ಮ ಪರಿಚಯ ಮಾಡಿಕೊಳ್ಳುತ್ತಾ ಶಾಲೆಯಲ್ಲಿ ತಾವು ಕಲಿಯುವಾಗ ಇದ್ದಂತಹ ಶಾಲಾ ಗುರುಗಳನ್ನು ನೆನೆದರು. ಶಾಲೆಯಲ್ಲಿ ಆ ದಿನಗಳಲ್ಲಿ ಆಡಿದ ತುಂಟಾಟಗಳನ್ನು ನೆನೆದರು. ಪರಸ್ಪರ ಒಬ್ಬರಿಗೊಬ್ಬರು ಕುಶಲೋಪರಿಗೈದರು.

ಈ ಸಂದರ್ಭದಲ್ಲಿ ಬಣಕಲ್ ವಿದ್ಯಾ ಸಂಸ್ಥೆಯ ಕೋಶಾಧಿಕಾರಿ ಬಿ ಕೆ ಪೃಥ್ವಿ, ನಿರ್ದೇಶಕರಾದ ಜಕವುಲ್ಲಾ, ಬಿ ಎಸ್ ವಿಕ್ರಂ, ಹಾಗೂ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.
ವರದಿ :✍️ಸೂರಿ ಬಣಕಲ್