ಚಾರ್ಮಾಡಿ ಘಾಟಿಯಲ್ಲಿ ಬ್ಯಾರಿಕೆಡ್ ಅಳವಡಿಕೆ:ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಪೊಲೀಸರಿಂದ ಸೂಚನೆ

ಬಣಕಲ್: ಮಳೆಗಾಲ ಆರಂಭವಾದೊಡನೆ ಘಾಟಿ ಪ್ರದೇಶದ ಜಲಪಾತಗಳ ಸೌಂದರ್ಯ ಹೆಚ್ಚಲಿದ್ದು, ಅವುಗಳ ವೀಕ್ಷಣೆ ನೆಪದಲ್ಲಿ ಪ್ರವಾಸಿಗರು ವಾಹನ ನಿಲ್ಲಿಸಿ ರಸ್ತೆ ಪಕ್ಕದ ಜರಿಗಳಲ್ಲಿ ಫೋಟೋ ತೆಗಿಸಿಕೊಳ್ಳೋದು ಬಂಡೆಗಳ ಮೇಲೆ ನಿಂತು ಸೆಲ್ಫಿ ತೆಗೆಯುವ ಹುಚ್ಚಾಟಕ್ಕೆ ಅನಾಹುತ ಸಂಭವಿಸುತ್ತದೆ, ವಾಹನ ರಸ್ತೆ ಬದಿಯಲ್ಲಿ ನಿಲ್ಲಿಸುವುದರಿಂದ ಈ ಸಮಯ ಮಳೆ, ಮಂಜು ಕವಿದ ವಾತಾವರಣ ಘಾಟಿ ಪ್ರದೇಶದಲ್ಲಿ ವಾಹನ ಚಲಾಯಿಸಲು ಸವಾಲಾಗುತ್ತದೆ. ಅದರಿಂದ ಜಲಪಾತ, ಕಣಿವೆಗಳ ಅಪಾಯಕಾರಿ ಸ್ಥಳಗಳನ್ನು ಹತ್ತಿಳಿಯುವ ಪ್ರವಾಸಿಗರಿಗೆ ಇಂದು ಬಣಕಲ್ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಪ್ರತಾಪ್ ರವರು ಸ್ಥಳಕ್ಕೆ ತೆರಳಿ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದಾರೆ. ಜಲಪಾತ ಇರುವ ಕಡೆ ಮುನ್ನೆಚ್ಚರಿಕೆ ವಹಿಸಲು ಬ್ಯಾರಿಕೆಡ್ ಅಳವಡಿಸಿದ್ದಾರೆ. ಈ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿಗಳಾದ ಅಭಿಷೇಕ್, ಸತೀಶ್. ಕುಮಾರ್ ಹಾಜರಿದ್ದರು.

ವರದಿ :✍️ಸೂರಿ ಬಣಕಲ್