ಬಣಕಲ್ ಹೋಬಳಿಯ ವಿವಿಧೆಡೆ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಉಪಯೋಗಿಸದೆ ಬಿಡಲಾಗಿದೆ. ಕಾಮಗಾರಿ ಮುಗಿದು ವರ್ಷ ಕಳೆದರೂ ಟ್ಯಾಂಕ್ಗಳಲ್ಲಿ ನೀರು ಸಂಗ್ರಹಿಸುತ್ತಿಲ್ಲ. ಹೊಸದಾಗಿ ಕಟ್ಟಿದ ನಂತರ ನೀರು ಬಿಡದಿದ್ದರೆ ಟ್ಯಾಂಕ್ ಬಿರುಕು ಬಿಡುವ ಸಂಭವ ಹೆಚ್ಚಿರುತ್ತದೆ. ಹಲವು ಕಡೆಗಳಲ್ಲಿ ಇದೇ ರೀತಿಯಾಗಿದೆ. ಕೆಲಸಗಳು ಮುಗಿದ ನಂತರ ಟ್ಯಾಂಕ್ಗಳು ತೇವಾಂಶ ಕಂಡಿಲ್ಲ. ಇದರಿಂದ ಈಗ ಸಮಸ್ಯೆಯಾಗುತ್ತಿದೆ. ನಲ್ಲಿಗಳಿಗೆ ನೀರು ಸರಬರಾಜು ಮಾಡುವುದು ವಿಳಂಬವಾಗಿ, ಇಡೀ ಯೋಜನೆಗೆ ಹಿನ್ನಡೆಯಾಗುತ್ತಿದೆ ಎಂದು ಬಣಕಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸತೀಶ್ ರವರು ಆರೋಪಿಸಿದ್ದಾರೆ.
ಮತ್ತಿಕಟ್ಟೆ ಯಲ್ಲಿ ಬಾವಿ ನಿರ್ಮಿಸಿ 6ವರ್ಷ ಕಳೆದಿದೆ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ 4ತಿಂಗಳು ಕಳೆದಿವಿ ಮನೆಮನೆಗೆ ನೀರಿನ ಪೈಪ್ ಅಳವಡಿಸಿ ತಿಂಗಳುಗಳೇ ಉರುಳಿವೆ. ಸರಿಸುಮಾರು80ಲಕ್ಷ ವೆಚ್ಚದ ಕಾಮಗಾರಿ ಇದಾಗಿದ್ದು ನೀರಿನ ಟ್ಯಾಂಕ್ ನಿರ್ಮಿಸಿದ್ದು, ನಿರ್ವಹಣೆ ಇಲ್ಲದೆ ಸೊರಗುತ್ತಿವೆ. ಗುತ್ತಿಗೆದಾರರನ್ನು ಕೇಳಿದರೆ ನಮ್ಮ ಕೆಲಸ ಮುಗಿದಿದೆ ಕೆ.ಇ.ಬಿ. ಅವರು ಮಾಡಬೇಕು ಎಂಬ ಉತ್ತರ ಬರುತ್ತದೆ ಕೆ ಇ ಬಿ ಅವರ ಬಳಿ ಕೇಳಿದರೆ ನಾವು ಟೆಂಡರ್ ಕೊಟ್ಟಿದ್ದೇವೆ ಅವರು ಬಂದು ಮಾಡುತ್ತಾರೆ ಎಂಬ ಉತ್ತರ ಸಿಗುತ್ತಿದೆ ಇದರಿಂದಾಗಿ ಗ್ರಾಮದ ಸುತ್ತಮುತ್ತಲಿನಲ್ಲಿ ನಡೆದ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಗುಡ್ಡೆಟ್ಟಿ ಯಲ್ಲಿ 4ವರ್ಷದಿಂದ ಕಾಮಗಾರಿ ಮುಗಿದರು ಸಂಪರ್ಕ ಭಾಗ್ಯ ದೊರಕಿಲ್ಲ. ಕುವೆಂಪು ನಗರ, ದಾಸರಹಳ್ಳಿ, ಬೊಮ್ಮನಹಳ್ಳಿ ಹೀಗೆ ಎಲ್ಲಾಗ್ರಾಮಗಳಲ್ಲೂ ಇದೇ ಸಮಸ್ಯೆ ಎಂದರು.ಇಂಜಿನಿಯರುಗಳ ನಿರ್ಲಕ್ಷ್ಯ ಇದರಲ್ಲಿ ಎದ್ದು ಕಾಣುತ್ತದೆ ಎಂದು ಆರೋಪಿಸಿದರು.
ಗ್ರಾಮದಲ್ಲಿ ಜಲ್ ಜೀವನ ಮಿಷನ್ ಆರಂಭಿಸಿ ವರ್ಷಗಳೇ ಉರುಳಿದರೂ ಕೂಡ ನೀರು ಹೊತ್ತು ತರುವ ಬವಣೆ ಮುಗಿದಿಲ್ಲ . ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಕುಡಿಸುವ ಉದ್ದೇಶವಿಟ್ಟುಕೊಂಡು ಈ ಯೋಜನೆಯನ್ನ ಅನುಷ್ಠಾನಕ್ಕೆ ತಂದು ಆರು ವರ್ಷಗಳಾಗುತ್ತ ಬಂದರೂ ಗ್ರಾಮದ ಜನರಿಗೆ ನೀರು ಸಿಗುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಪ್ರತಿ ಮನೆಗೆ ನೀರು ಒದಗಿಸಿ ಜನರ ದಾಹ ನೀಗಿಸಬೇಕು ಎಂದು ಒತ್ತಾಯಿಸಿದರು.
ವರದಿ ✍️ಸೂರಿ ಬಣಕಲ್