ಬಣಕಲ್ ನಿಂದ ಮತ್ತಿಕಟ್ಟೆ ರಸ್ತೆಯ ಐದು ಕಿಲೋಮೀಟರ್ ವರೆಗೆ ಬಣಕಲ್ ಗ್ರಾಮ ಪಂಚಾಯಿತಿ, ಫಾರೆಸ್ಟ್ ಇಲಾಖೆ, ಮತ್ತಿ ಕಟ್ಟೆ ಹೆಗ್ಗುಡ್ಲು ತೋಟದ ಮಾಲೀಕರ ಸಹಾಯದೊಂದಿಗೆ ಮತ್ತಿಕಟ್ಟೆ, ಹೆಗ್ಗುಡ್ಲು ಆಟೋ ಚಾಲಕರು ಮತ್ತು ಮತ್ತಿಕಟ್ಟೆ ಗ್ರಾಮಸ್ಥರ ಸಹಾಯದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು. ರಸ್ತೆ ಬದಿಯಲ್ಲಿ ಬೆಳೆದ ಪೊದೆಗಳಿಂದ ವಾಹನಗಳು ಬರುವುದು ಕಾಣುತ್ತಿರಲಿಲ್ಲ ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿತ್ತು. ಮುಂದೆ ಆಗುವ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಜೆ ಸಿ ಬಿ ಮುಖಾಂತರ ಮತ್ತಿಕಟ್ಟೆ ಗ್ರಾಮಸ್ಥರು ಸೇರಿ ಗಿಡ ಗುಂಟೆಗಳನ್ನು ತೆರವು ಗೊಳಿಸುವ ಮುಖಾಂತರ ಪ್ರಶಂಸೆಗೆ ಪಾತ್ರರಾದರು.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ