ಬಣಕಲ್ ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ,ಎಲ್ಲಡೆ ಹಾರಾಡಿತು ತ್ರಿವರ್ಣ ಧ್ವಜ

ಬಣಕಲ್ ನಲ್ಲಿ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಎಲ್ಲಿ ನೋಡಿದರೂ ಕೇಸರಿ, ಬಿಳಿ, ಹಸಿರು ಬಣ್ಣದ ಬಾವುಟಗಳು ಮುಗಿಲೆತ್ತರಕ್ಕೆ ಹಾರಾಡುತ್ತಿದ್ದವು. ದಾರಿಯುದ್ದಕ್ಕೂ ಬಣಕಲ್ ನ ಪ್ರೌಢಶಾಲೆ. ರಿವರ್ ವ್ಯೂಶಾಲೆ . ವಿದ್ಯಾಭಾರತಿ ಶಾಲೆ. ಉರ್ದು ಶಾಲೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಮಕ್ಕಳು ಸಾಲುಸಾಲಾಗಿ ತ್ರಿವರ್ಣ ಧ್ವಜವನ್ನು ಹಿಡಿದು ಭಾರತಾಂಬೆಗೆ ಜೈಕಾರ ಹಾಕಿ ಸಾಗಿದ ದೃಶ್ಯ ಮನ ಸೋರೆಗೊಂಡಿತು.

ಬಣಕಲ್ ಆಟೋ ಚಾಲಕರು. ವಾಹನ ಚಾಲಕರು ಕೂಡ ಭಾರತದ ಬಾವುಟವನ್ನು ವಾಹನಗಳಿಗೆ ಕಟ್ಟಿ ಸಂಭ್ರಮದಿಂದ ದೇಶಪ್ರೇಮವನ್ನು ವ್ಯಕ್ತಪಡಿಸಿದರು. ಶಿಸ್ತಿನ ಸಿಪಾಯಿಗಳಂತೆ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು. ನಂತರ ದೇಶಭಕ್ತಿ ಗೀತೆಗಳು ಹಾಗೂ ರಾಷ್ಟ್ರಗೀತೆಯನ್ನು ಹಾಡಿ ಸಂಭ್ರಮಿಸಿದರು.

ವರದಿ: ✍️ಸೂರಿ ಬಣಕಲ್