ಬಣಕಲ್: ಹೆಗ್ಗುಡ್ಲು ಗ್ರಾಮ ಭಾನುವಾರ ಹಾಗೂ ಸೋಮವಾರ ದಂದು ಇಡೀ ಗ್ರಾಮವೇ ಹಬ್ಬದ ವಾತಾವರಣದಲ್ಲಿ ತೆಲಾಡುತಿತ್ತು. ದೂರದ ಊರುಗಳಿಂದ ನೆಂಟರಿಷ್ಟರ ಆಗಮನದ ದೃಶ್ಯ ಪ್ರತಿ ಮನೆಯಲ್ಲೂ ಹಬ್ಬದೂಟದ ಸಂಭ್ರಮ ಇದಕ್ಕೆಲ್ಲ ಕಾರಣ ಹೆಗ್ಗುಡ್ಲು ಗಿರಿ ಜಾತ್ರೆ ಹಾಗೂ ಸುಗ್ಗಿ ಹಬ್ಬದ ಸಡಗರ.
ಹೆಗ್ಗುಡ್ಲು ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಜಾತ್ರ ಮಹೋತ್ಸವ(ಸುಗ್ಗಿ ಹಬ್ಬ)ವಿಜೃಂಭಣೆಯಿಂದ ನಡೆಯಿತು. ಭಾನುವಾರದಂದು ಗಿರಿಯಲ್ಲಿ ಜಾತ್ರೆಗೆ ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ಸೋಮವಾರದಂದು ನಡೆದ ಕೆಂಡ ಸೇವೆಯನ್ನು ಗ್ರಾಮಸ್ಥರು ಭಕ್ತಿ ಭಾವದಿಂದ ನೋಡಿದರು. ಸುತ್ತಮುತ್ತಲಿನ ಹಳ್ಳಿಗಳಲ್ಲದೆ, ದೂರದ ಊರಿನಿಂದಲೂ ಸಹ ಭಕ್ತರು ಆಗಮಿಸಿ ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಮಲ್ಲಿಕಾರ್ಜುನ ಸ್ವಾಮಿಯ ಕೃಪೆಗೆ ಪಾತ್ರರಾದರು.
ವರದಿ :✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ