ಬಣಕಲ್ ನ ವಿಮುಕ್ತಿ ಸಂಸ್ಥೆಯ ವತಿಯಿಂದ ಸ.ಕಿ.ಪ್ರಾ.ಶಾಲೆ, ಬಣಕಲ್ ವಿಲೇಜ್ ನ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಫಾದರ್ ಎಡ್ವಿನ್ ಡಿಸೋಜಾ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳಿಗೆ ಬಣಕಲ್ ವಿಲೇಜ್ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದು ಇದೀಗ ಕಂಪ್ಯೂಟರ್ ಶಿಕ್ಷಣಕ್ಕೆ ಚಾಲನೆ ನೀಡುವುದರಿಂದ ಎಳವೆಯಲ್ಲೇ ಮಕ್ಕಳು ತಾಂತ್ರಿಕ ಜ್ಞಾನ ಹೊಂದಲು ಸಹಕಾರಿಯಾಗಲಿದೆ ಎಂದರು.
ಬಣಕಲ್ ಗ್ರಾಮ ಪಂಚಾಯತಿ ಅಧ್ಯಕ್ಷೆ ಆತೀಕಾ ಭಾನು, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ್, ಸುನಂದ, ಭಾರತಿಸುನೀತಾ, ಶಿವಮೂರ್ತಿ, ಪೂರ್ಣೇಶ್ ಮತ್ತಾವರ ಮತ್ತಿತರರು ಹಾಜರಿದ್ದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ