ಬಣಕಲ್: ಬಣಕಲ್ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರ ಸ್ಥಾನ ಪಕ್ಷದ ಒಡಂಬಡಿಕೆಯಂತೆ ಒಂದೂವರೆ ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ತೆರವಾಗಿದ್ದ ಕಾರಣ ಇಂದು ಚುನಾವಣೆ ನಿಗಧಿಯಾಗಿತ್ತು.
ಚುನಾವಣೆಗೆ ಅದಂ ಅವರನ್ನು ಹೊರತುಪಡಿಸಿ ಮತ್ಯಾರು ನಾಮ ಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ಪ್ರಜ್ವಲ್ ರವರು ಅದಂ ಅವರನ್ನು ಅವಿರೋಧವಾಗಿ ಉಪಾಧ್ಯಕ್ಷರು ಎಂದು ಘೋಷಿಸಿದರು.ಈ ಸಂದರ್ಭದಲ್ಲಿ ಅದಂ ರವರ ಬೆಂಬಲಿಗರು ಉಪಾದ್ಯಕ್ಷರಾದ ಹಿನ್ನಲೆಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.
ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ನೂತನ ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.
ಅಧಿಕಾರ ಸ್ವೀಕರಿಸಿ ಉಪಾಧ್ಯಕ್ಷ ಅದಂ ಮಾತನಾಡಿ ನಾವು ಜನರ ಸೇವಕರು ಜನರ ಆಶಯಕ್ಕೆ ತಕ್ಕಂತೆ ಕಾನೂನಾತ್ಮಕ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಆತೀಕ ಭಾನು.ಸದಸ್ಯರಾದ ಮದುಕುಮಾರ್, ,ಲೀಲಾವತಿ,ಇರ್ಫಾನ್,ವಿನಯಕುಮಾರ್, ಸುರೇಶ್,ಎಚ್.ಪಿ. ತಾರಾನಾಥ್,ಸಿರಾಜ್, ಜರಿನಾಸುಜಾತ, ರತ್ನ,,ಸುನೀತಾ,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಎನ್.ಕೃಷ್ಣಪ್ಪ, ಪಂಚಾಯಿತಿ ಸಿಬ್ಬಂದಿ ವರ್ಗ ನೂತನ ಉಪಾಧ್ಯಕ್ಷರಿಗೆ ಶುಭಕೋರಿದರು.