ಬಣಕಲ್ ನಲ್ಲಿ ದಿನಸಿ ಅಂಗಡಿ ನಡೆಸುತ್ತಿರುವ BM ಸ್ಟೋರ್ ಮಾಲೀಕರಾದ ಆಲಿ ಎಂಬುವವರ ಮನೆಯ ಮುಂದೆ ನಿಲ್ಲಿಸಿದ್ದ ಸ್ಕೂಟಿ ಕಳವಾದ ಬಗ್ಗೆ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂದಿನಂತೆ ಭಾನುವಾರ ರಾತ್ರಿ ಮನೆ ಮುಂದೆ ವಾಹನವನ್ನು ನಿಲ್ಲಿಸಿದ್ದರು. ಬೆಳಗಿನ ಜಾವಾ 3ಗಂಟೆ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳರು ನಿಲ್ಲಿಸಿದ ಸ್ಕೂಟಿಯನ್ನು ಕದ್ದು ಪರಾರಿಯಾಗಿದ್ದಾರೆ. ಈ ದೃಶ್ಯ CC ಕ್ಯಾಮರದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಾಹನದ ಮಾಲೀಕರಾದ ಆರಫತ್ ರವರು ನನ್ನ ಮನೆಯ ಮುಂದೆಯೇ ನಿಲ್ಲಿಸಿದ್ದ ಬೈಕನ್ನು ಕಳವು ಮಾಡಲಾಗಿದೆ.ರಾಜಾರೋಷವಾಗಿ ಕದ್ದು ಪರಾರಿಯಾಗಿದ್ದಾರೆ. ಬಣಕಲ್ ನಲ್ಲಿ ಕಳ್ಳರ ಹಾವಳಿ ಮಿತಿಮೀರಿದೆ ಅವರಿಗೆ ಯಾರ ಭಯವು ಇಲ್ಲದಂತಾಗಿದೆ. ಅವರು ಆಡಿದ್ದೇ ಆಟ ಎಂಬಂತಾಗಿದೆ. ಆದಷ್ಟು ಬೇಗ ಕಳ್ಳರಿಗೆ ಕಡಿವಾಣ ಬೀಳದೆ ಹೋದರೆ ಮುಂದೆ ಅಪರಾಧ ಪ್ರಕರಣಗಳು ಇನ್ನಷ್ಟು ಹೆಚ್ಚುತ್ತ ಹೋಗುತ್ತವೆ. ಆದಷ್ಟು ಬೇಗ ಕಳ್ಳಕಾಕರಿಗೆ ಕಡಿವಾಣ ಬಿದ್ದು ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಲಿ ಎಂದರು.
ವರದಿ :ಸೂರಿ ಬಣಕಲ್