ಮೂಡಿಗೆರೆ ತಾಲೂಕಿನ ಫಲ್ಗುಣಿ ಹೇಮಾವತಿ ಹೊಳೆಯ ಬದಿಯಲ್ಲಿ ಅಪರಿಚಿತ ಮಹಿಳೆಯು ಅನಾಥವಾಗಿ ಬಿದ್ದಿದ್ದನ್ನು ಗಮನಿಸಿದ ಪಲ್ಗುಣಿ ಗ್ರಾಮಸ್ಥರು ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ಸುರಕ್ಷಿತವಾಗಿ ಸೇರಿಸಿದ್ದಾರೆ.
ಈ ಸಂದರ್ಭದಲ್ಲಿ ಯುವಮೋರ್ಚ ಬಣಕಲ್ ಹೋಬಳಿಯ ಅಧ್ಯಕ್ಷರಾದ ಮಿಥುನ್(ಬೆಳ್ಳಿ) ಹಾಗೂ ಫಲ್ಗುಣಿ ಗ್ರಾಮಸ್ಥರು ಮತ್ತು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸೇರಿದಂತೆ,ಸಮಾಜ ಸೇವಕ ಆರಿಫ್ ಬಣಕಲ್ ಇದ್ದರು.
