ಬಣಕಲ್ ನಲ್ಲಿ ಅದ್ದೂರಿಯಾಗಿ ನಡೆದ ಗುಳಿಗ ದೈವದ ಕೋಲಾ

ಬಣಕಲ್ ನ ಶ್ರೀ ಮಹಾಮಾಯಿ ದೇವಾಲಯದಲ್ಲಿ ಅದ್ಧೂರಿಯಾಗಿ ಗುಳಿಗ ದೈವದ ಕೋಲ ಉತ್ಸವ ನಡೆಯಿತು. ವಿಭಿನ್ನವಾದ ಆಚರಣೆ ವೀಕ್ಷಿಸಲು ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ್ದರು.
ಕೋಲ ಉತ್ಸವ
ಬಣಕಲ್ ನಲ್ಲಿ ನಡೆದ ಗುಳಿಗ ದೈವದ ಕೋಲ ಈ ಬಾರಿ ಅದ್ಧೂರಿಯಾಗಿ ನಡೆಯಿತು. ರಾತ್ರಿಯಿಡಿ ನಡೆದ ಈ ಕೋಲಕ್ಕೆ ಸಾವಿರಾರರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು. ದೇವಸ್ಥಾನದಲ್ಲಿ ಮದ್ಯಾಹ್ನ ಹಾಗೂ ರಾತ್ರಿ ಬಂದಂತಹ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು..ಕೋಲಾ ಕಟ್ಟಿದವರ ವೇಷಭೂಷಣಗಳು, ನೃತ್ಯಗಳು ನೋಡುಗರ ರೋಮಾಂಚನಗೊಳಸಿವಂತಿತ್ತು. ಈ ದೃಶ್ಯವನ್ನು ನೋಡುವುದಕ್ಕಾಗಿಯೇ ಹೆಚ್ಚಿನ ಭಕ್ತಾದಿಗಳು ಕಾದು ಕುಳಿತ್ತಿದ್ದರು ಭಕ್ತಿ ಬಾವ ಮೂಡಿಸೋ ವೇಷ ಲಯಕ್ಕೆ ತಕ್ಕಂತೆ ವಾದ್ಯ ಘೋಷ.. ಚಂಡೆ ಮದ್ದಳೆಯ ನಾದ.. ತಾಳಕ್ಕೆ ತಕ್ಕಂತೆ ಹೆಜ್ಜೆ. ದೈವದ ಸಿರಿ ಸಿಂಗಾರ.. ನಂಬಿ ಬಂದ ಭಕ್ತರಿಗೆ ಅಭಯ.. ಅಲಂಕಾರಗೊಂಡ ನೇಮದ ಚಪ್ಪರ ಭಯ ಭಕ್ತಿಯಲ್ಲಿ ಕುಳಿತ ಜನ..ಮುಂಜಾನೆವರೆಗೆ ನಡೆದ ಕೋಲಾ ನೋಡುಗರನ್ನು ಮಂತ್ರ ಮುಗ್ದಗೊಳಿಸಿತು. ದೇವಸ್ಥಾನ ಆಡಳಿತ ಮಂಡಳಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ ರೀತಿ ಪ್ರಶಂಸೆಗೆ ಪಾತ್ರವಾಯಿತು.ಕೋಲಾ ಒಂದು ವಿಶಿಷ್ಟ ಆಚರಣೆ.. ಗ್ರಾಮದ ಏಳಿಗೆಗಾಗಿ ಭೂತಕೋಲಾ ನಡೆಸುವ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬಂದಿದೆ ಅದೇ ರೀತಿ ಈ ವರ್ಷವೂ ಮಹಮ್ಮಾಯಿ ದೇವಸ್ಥಾನ ಆಡಳಿತ ಮಂಡಳಿ ಅದ್ದೂರಿಯಾಗಿ ಗುಳಿಗ ಕೋಲವನ್ನು ನಡೆಸಿದರು .
ವರದಿ,:ಸೂರಿ ಬಣಕಲ್