ಬಣಕಲ್ :ಈ ದಿನ ಬಣಕಲ್ ಗ್ರಾಮ ಪಂಚಾಯತಿ ನೂತನ ಅದ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಆತಿಕಾ ಭಾನು ರವರು ಅವಿರೋಧ ಆಯ್ಕೆಯಾದರು,ಶ್ರೀಮತಿ ಲೀಲಾವತಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಅತಿಕಾ ಬಾನು ಹೊರತು ಪಡಿಸಿ ಬೆರ್ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಸಮಾರಂಭದಲ್ಲಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷರಾದ ಸುಬ್ರಮಣ್ಯ, ನಿರ್ಗಮಿತ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ, ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಎಸ್.ಬಿ.ದೇವರಾಜು ಸಬ್ಲಿ , ಗ್ರಾ.ಪಂ.ಉಪಾಧ್ಯಕ್ಷರಾದ ಇರ್ಫಾನ್, ಉಮ್ಮರ್, ಆಶ್ರಿತ್, ಗ್ರಾ.ಪಂ.ಸದಸ್ಯರಾದ ವಿನಯ್ ಕುಮಾರ್, ಶಿರಾಜ್, ಮದು, ಜರೀನಾ, ರತ್ನ ಗಿರೀಶ್, ಮುಖಂಡರಾದ ಗಿರೀಶ್, ರುದ್ರಯ್ಯ, ಅರುಣ್, ಹೆಚ್.ಚಂದ್ರಪ್ಪ, ದಿಲ್ದಾರ ಬೇಗಂ, ಚಂದ್ರಯ್ಯ ಎಸ್.ಬಿ. ಮೇಲ್ವಿನ್ ಲಸ್ರದೋ, ಮುಂತಾದವರಿದ್ದರು
