ಬಣಕಲ್ ನಲ್ಲಿ ಚಂದನ್ ಮಾಲೀಕತ್ವದ ದಿ ಮಲ್ನಾಡ್ ಇಕೊ ಸ್ಟೇ ಶುಭಾರಂಭ

ಬಣಕಲ್: ಮೂಡಿಗೆರೆ ತಾಲೂಕ್ಕಿನ ಬಣಕಲ್ ನಲ್ಲಿ ನೂತನವಾಗಿ ದಿ ಮಲ್ನಾಡ್ ಇಕೊ ಸ್ಟೇ ಎಂಬ ವಸತಿ ಗೃಹ ಶಭಾರಂಭ ಗೊಂಡಿತು.

ಚಂದನ್ ಮಾಲೀಕತ್ವದ ಇಕೊ ಸ್ಟೇ ಎಂಬ ಹೆಸರಿನ ಹೋಂಸ್ಟೇ ಬಣಕಲ್ ನಲ್ಲಿ ಈಗ ಪ್ರವಾಸಿಗರನ್ನು ಸ್ವಾಗತಿಸುತ್ತಿದೆ. ಸಕಲ ಸೌಲಭ್ಯ ಹೊತ್ತು ನಿಂತಿರುವ ಈ ಹೋಂ ಸ್ಟೇ ಐದು ರೂಂಗಳುಳ್ಳ ಈ ಹೋಂಸ್ಟೆ ಒಮ್ಮೆಗೆ 25 ಜನರಿಗೆ ವಸತಿ ಊಟೋಪಚಾರ ಒದಗಿಸುವ ಸೌಲಭ್ಯವನ್ನು ಹೊಂದಿದೆ. ಆನ್ ಲೈನ್ ಬುಕಿಂಗ್ ವ್ಯವಸ್ಥೆ ಹೊಂದಿರುವ ಈ ಹೋಂಸ್ಟೆ ಚಂದನ್ ಎಂಬ ಕೃಷಿಕರ ಒಡೆತನದ್ದು ಎಂಬುದು ಹೆಮ್ಮೆಯ ಸಂಗತಿ. ವಿಸ್ತಾರದ ತೊಟದ ನಡುವೆ ಇರುವ ಇದು ಆಹ್ಲಾದಕರ ಎನ್ನಿಸುವುದರಲ್ಲಿ ಅನುಮಾನವಿಲ್ಲ.

ಹೋಂ ಸ್ಟೇಯ ಕೃಷಿಕ ಮಾಲಿಕರು ತಮ್ಮಲ್ಲಿ ಉಳಿಯುವುವ ಪ್ರವಾಸಿಗರ ಮನತಣಿಸಲು ಸಿದ್ದರಾಗಿದ್ದಾರೆ. “ಇಕೊ ಸ್ಟೇ “ಗೆ ಒಮ್ಮೆ ಬೇಟಿ ನೀಡಿ ಮಲೆನಾಡು ಊಟದ ಸವಿಯ ಜತೆಗೆ ಹತ್ತಾರು ಸ್ಥಳಗಳ ನೋಟ ಸವಿಯಬಹುದು.ಪುಣ್ಯಸ್ಥಳಹಾಗೂ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರು ಒಮ್ಮೆ ಬಣಕಲ್ ಮಲ್ನಾಡು ಕೆಫೆಯಲ್ಲಿ ಕಾಫಿ ಸೇವನೆ ಮಾಡುತ್ತ ತಣ್ಣಗಿನ ಗಾಳಿಯ ನಡುವೆ ಹರಿಯುವ ಹೇಮಾವತಿ ನದಿಯ ತಟದಲ್ಲಿ ಪಕ್ಷಿಗಳ ಕಲರವ ಕೇಳುತ್ತಾ ಕೆಲ ಹೊತ್ತು ವಿಶ್ರಾಂತಿ ಪಡೆದು ಸಾಗಲು ಕೈ ಬೀಸಿ ಕರೆಯಲು ಸಜ್ಜಾಗಿ ನಿಂತಿದೆ ದಿ ಮಲ್ನಾಡ್ ಇಕೊ ಸ್ಟೇ.

Sahifa Theme License is not validated, Go to the theme options page to validate the license, You need a single license for each domain name.