ಉತ್ತಮ ಸೇವೆ ಮೂಲಕ ಜನ ಸ್ನೇಹಿಯಾಗಿದ್ದ ಬಣಕಲ್ ಮಹಿಳಾ ಪಿ ಎಸ್ ಐ ಗಾಯಿತ್ರಿ ವರ್ಗಾವಣೆ

ಬಣಕಲ್ :ಸರಳ, ಜನಸ್ನೇಹಿ ಅಧಿಕಾರಿಯಾಗಿ ಬಣಕಲ್ ಠಾಣೆಯಲ್ಲಿ ವರ್ಷಗಳಿಂದ ಉತ್ತಮ ಸೇವೆ ಮೂಲಕ ಜನಮನ್ನಣೆ ಪಡೆದಿದ್ದ, ಗಾಯಿತ್ರಿ ಅವರು ಬಣಕಲ್ ಠಾಣೆ ಯಿಂದ ವರ್ಗಾವಣೆ ಹೊಂದಿದ್ದಾರೆ , ಯಾವುದೇ ವಿವಾದಗಳಿಗೆ ಸಿಲುಕಿಕೊಳ್ಳದೇ ಜನಸ್ನೇಹಿಯಾಗಿ ಗುರುತಿಸಿಕೊಂಡಿದ್ದರು. ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುತ್ತ ಸಾರ್ವಜನಿಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು.
ಯುವಕರು ಸಂಘಟಿಸುವ ಕ್ರೀಡಾಕೂಟ ಅಥವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವರ ಜೊತೆಗೆ ನಿಂತು ಪ್ರೋತ್ಸಾಹ ನೀಡುತ್ತಿದ್ದುದು ಗಾಯಿತ್ರಿ ಮೌಲ್ಯಯುತ ಗುಣಗಳಲ್ಲಿ ಒಂದು. ಹಾಗೆ ಪೊಲೀಸ್ ಇನ್ಸ್ಪೆಕ್ಟರ್ ಎಂಬ ಅಹಂ ತೋರಿಸದೆ ಬಡವ ಶ್ರೀಮಂತ ಎಂಬ ಬೇದ ಭಾವ ತೋರಿಸದೆ ಸಾರ್ವಜನಿಕರೊಂದಿಗೆ ಬೆರೆಯುತ್ತಾ ಜನ ಮನ್ನಣೆ ಪಡೆದಿದ್ದರು ಬಣಕಲ್ ಠಾಣೆಗೆ ಬಂದ ಮೇಲೆ ಗಾಯಿತ್ರಿ ಅವರು ಹಲವಾರು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾರೆ. ಮಹಿಳಾ ಪಿ ಎಸ್ ಐ ಆಗಿದ್ದರು ಸಹ ಅವರು ಕೈಗೊಳ್ಳುತ್ತಿದ್ದ ಕಾರ್ಯ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಇಂತಹ ಉತ್ತಮ ಅಧಿಕಾರಿ ಬಣಕಲ್ ಠಾಣೆಯಿಂದ ವರ್ಗಾವಣೆ ಆಗಿರುವುದು ಬಣಕಲ್ ಗ್ರಾಮದ ಜನತೆಗೆ ಬೇಸರ ತರಿಸಿದೆ. ಇರುವಷ್ಟು ಕಾಲ ಉತ್ತಮ ಸೇವೆ ಮೂಲಕ ಬಣಕಲ್ ಠಾಣೆಗೆ ಹಾಗೂ ಬಣಕಲ್ ಗ್ರಾಮಕ್ಕೆ ಗಾಯಿತ್ರಿ ಅವರು ಉತ್ತಮ ಸೇವೆ ಒದಗಿಸಿದ್ದಾರೆ ಅವರ ಸೇವೆ ಬಣಕಲ್ ಜನತೆ ಕಳೆದುಕೊಳ್ಳುತ್ತಿರುವುದು ಬೇಸರ ತರಿಸಿದೆ.ಅವರ ಮುಂದಿನ ಸೇವೆಯ ಪಯಣ ಸುಖಕರವಾಗಿರಲಿ ಎಂಬುದು ಬಣಕಲ್ ನ್ಯೂಸ್ ವತಿಯಿಂದ ಶುಭ ಹಾರೈಕೆ.