ಹಾಸನದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿಬಣಕಲ್ ಶಾಲಾ ವಿದ್ಯಾರ್ಥಿಗಳ ಸಾಧನೆ


ಬಣಕಲ್ :ಹಾಸನದಲ್ಲಿನಡೆದ ಅಂತರ್ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಬಣಕಲ್ ನ ಶಾಲಾ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬಣಕಲ್ ಪ್ರೌಢಶಾಲೆಯ ಈಶ್ವರಿ ಸಿರಿಗಂಧ, ಆದಿತ್ಯ.ಎಚ್.ಎಸ್ 16 ರ ವಯೋಮಾನದ ಗುಂಪಿನ ಬಾಲಕಿ ಮತ್ತು ಬಾಲಕರ ವಿಭಾಗದಲ್ಲಿ ದ್ವಿತೀಯ ಬಹುಮಾನ, ನಜೆರತ್ ಶಾಲೆಯ ಸುವಿಧ್.ಪಿ 7 ರ ವಯೋಮಾನದ ಗುಂಪಿನಲ್ಲಿ ದ್ವಿತೀಯ ಬಹುಮಾನ ಧಾರ್ಮಿಕ್.ಎಚ್.ಎಲ್ 9 ರ ವಯೋಮಾನದ ಗುಂಪಿನಲ್ಲಿ ಸಮಾಧಾನಕರ ಬಹುಮಾನ ಮತ್ತು ರಿವರ್ ವ್ಯೂ ಶಾಲೆಯ ಶಕ್ತಿ 11 ರ ವಯೋಮಾನದ ಗುಂಪಿನಲ್ಲಿ ದ್ವಿತೀಯ ಬಹುಮಾನ ಗಳಿಸಿದ್ದಾರೆ.