ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ:ಪ್ರಯಾಣಿಕರು ಪಾರು

ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ:ಪ್ರಯಾಣಿಕರು ಪಾರು ಮೂಡಿಗೆರೆ :ಚಾರ್ಮಾಡಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅವಘಡ ಸಂಭವಿಸಿ ಕಾರು ಸಂಪೂರ್ಣ ಸುಟ್ಟು ಹೋದ ಘಟನೆ ಸೋಮವಾರ ಮಧ್ಯರಾತ್ರಿ 12ಗಂಟೆಗೆ ಚಾರ್ಮಾಡಿ ಘಾಟ್ ಅಣ್ಣಪ್ಪ ಸ್ವಾಮಿ ದೇವಸ್ಥಾನ ಸಮೀಪ ನಡೆದಿದೆ,ಕಾರು ಜೋಕಟ್ಟೆಯಿಂದ ಬೆಂಗಳೂರಿಗೆ ಹೋಗುತಿತ್ತು ಎಂದು ತಿಳಿದುಬಂದಿದೆ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಡೀಸೆಲ್ ಟ್ಯಾಂಕ್ ಗೆ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ,ಸ್ಥಳಕ್ಕೆ ಬಣಕಲ್ ಠಾಣಾಧಿಕಾರಿ ಗಾಯಿತ್ರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ತನಿಖೆ ಕೈಗೊಂಡರು.