ಸಬ್ಲಿ :ಭಾರಿ ಮಳೆಗೆ ಮನೆ ನೆಲಸಮ

ಬಣಕಲ್ :ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆಯಾಗುತ್ತಿದ್ದು ಈ ಪ್ರದೇಶಗಳು ಸುತ್ತಮುತ್ತಲ ಗ್ರಾಮಗಳ ಜಲಮೂಲಗಳು ತುಂಬಿ ಹರಿಯುತ್ತಿದ್ದು ಗದ್ದೆ ಮತ್ತು ರಸ್ತೆಗಳು ಜಲಾವೃತಗೊಂಡಿವೆ ನೆನ್ನೆ ಈ ಭಾಗದ ಸಬ್ಳಿ ಗ್ರಾಮದಲ್ಲಿ ಭಾರಿ ಮಳೆಗೆ ಮನೆಯೊಂದು ನೆಲಸಮ ಗೊಂಡಿದೆ ಇದು ರಾಮಮ್ಮ ಸುಬ್ಬಯ್ಯ ರವರ ಮನೆಯಾಗಿದ್ದು ಅದೃಷ್ಟವಶಾತ್ ಅವರು ಮನೆಯಲ್ಲಿ ಇರಲಿಲ್ಲ ಎರಡು ದಿನದ ಹಿಂದೆ ಅಣ್ಣನ ಮನೆಗೆ ಹೋಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ದೇವರಾಜ್ ರವರು ಸ್ಥಳಕ್ಕೆ ಭೇಟಿ ನೀಡಿ ಅನಾಹುತದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ