ಸಾಲ ಕೊಟ್ಟು ಜೀವ ಹಿಂಡುವ ಆಪ್ :ಜನತೆ ಎಚ್ಚರವಹಿಸಿ ಪಿ ಎಸ್ ಐ ಗಾಯಿತ್ರಿ

ಬಣಕಲ್: ಕೆಲವೇ ನಿಮಿಷಗಳಲ್ಲಿ ಸಾಲ ಕೊಡುವ ಡಿಜಿಟಲ್ ಆಪ್ ಗಳು ಜನರ ಜೀವಕ್ಕೆ ಅಪತ್ತಾಗಿ ಪರಿಣಮಿಸಿದೆ!ಅಂದಾಜು 600ಅನಧಿಕೃತ ಲೋನ್ ಆಪ್ ಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ)ಗುರುತಿಸಿದೆ ನಿಯಮ ಉಲ್ಲಂಘನೆ ಆರೋಪದಲ್ಲಿ ಗೂಗಲ್ ಪ್ಲೇಸ್ಟೋರ್ ನಿಂದ ಅಧಿಕ ಆಪ್ ಗಳನ್ನು ತೆಗೆದುಹಾಕಿದರೂ ಫೇಸ್ ಬುಕ್ ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸಕ್ರಿಯವಾಗಿದ್ದು ಸಾಲದ ಅಪತ್ತಿನ ಬಗ್ಗೆ ಪೊಲೀಸರು ಜನರಿಗೆ ತಿಳಿಸುತ್ತಿದ್ದಾರೆ, ನೂರಾರು ಪೋಸ್ಟರ್ ನಲ್ಲಿ ನೂರಾರು ಸಾಲದ ಅಪ್ಲಿಕೇಶನ್ ಗಳು ಬಳಕೆಯಲ್ಲಿವೆ.ಇದರಲ್ಲಿ ಬೆರಳಣಿಕೆಯಷ್ಟೇ ಆರ್ ಬಿ ಐ ಅನುಮೋದಿತ ಆಪ್ ಗಳಾಗಿದ್ದು ಉಳಿದೆಲ್ಲವೂ ಅನಧಿಕೃತ. ಇಂತಹ ಆಪ್ ಗಳ ಮೂಲಕ ಸಾಲ ಪಡೆಯುವುದು ಅಪಾಯಕಾರಿ. ಇಂತಹ ಬೇನಾಮಿ ಆಪ್ ಗಳ ನಿರ್ವಾಹಕರು ಸಾಲಕ್ಕೆ ಹೆಚ್ಚಿನ ಬಡ್ಡಿ ದರ ವಿಧಿಸುವುದು ಇಎಂಐ ಪಾವತಿಸದವರಿಗೆ ಕಿರುಕುಳ ನೀಡುವುದಷ್ಟೇ ಅಲ್ಲದೇ ಬ್ಲಾಕ್ ಮೇಲ್ ಮಾಡುವ ನೂರಾರು ಪ್ರಕರಣಗಳು ನಿತ್ಯ ಬೆಳಕಿಗೆ ಬರುತ್ತಿವೆ. ಆಪ್ ಗಳ ಸಾಲದ ಟಾರ್ಚರ್ ತಾಳಲಾರದೆ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿರುವ ಹಲವಾರು ಪ್ರಕರಣಗಳು ವರದಿಯಾಗಿವೆ ಇದರಿಂದ ಜನ ಎಚ್ಚೆತ್ತು ಕೊಳ್ಳಬೇಕಿದೆ ಈ ರೀತಿ ಪ್ರಕರಣ ಗಮನಕ್ಕೆ ಬಂದಲ್ಲಿ ತಕ್ಷಣಕ್ಕೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ತಿಳಿಸಿದ್ದಾರೆ ರಾಜ್ಯದ್ಯಂತ ಇವರ ನೆಟ್ವರ್ಕ್ ಹಬ್ಬಿದೆ ಇದರ ಬಗ್ಗೆ ಜನರಿಗೆ ಎಚ್ಚರ ವಹಿಸಲು ಪೊಲೀಸರು ನಿರಂತರವಾಗಿ ಮಾಹಿತಿ ಕೊಡುತ್ತಿದ್ದಾರೆ ಎಂದರು .

ಟಾರ್ಚರ್ ಹೇಗೆ?
(1)ಕೇಳುವ ದಾಖಲೆ ಹಾಗೂ ವೈಯುಕ್ತಿಕ ವಿವರ ಕೊಟ್ಟರೆ ಕೆಲವೇ ನಿಮಿಷದಲ್ಲಿಸಾಲ ಮಂಜೂರು. ಮಾಡುತ್ತಾರೆ
(2)ಸಾಲ ಪಡೆದರೆ ಫೋನ್ ಗಳಲ್ಲಿರುವ ಎಲ್ಲಾ ಕಾಂಟೆಕ್ಟ್ ಗಳು ಆಪ್ ಆಪರೇಟರ್ ಗಳಿಗೆ ಸಿಗುತ್ತದೆ
(3)ಸಾಲಗಾರರು ಇ ಎಂ ಐ ಪಾವತಿಸಲು ಒಂದು ದಿನ ವಿಳಂಬವಾದರೂ ಕಿರುಕುಳ ಶುರುವಾಗುತ್ತದೆ
(4)ಫೋನ್ ಕಾಂಟೆಕ್ಟ್ ಲೀಸ್ಟ್ ನ ಗ್ರೂಪ್ ಸೃಷ್ಟಿಸಿ ಸಾಲ ತೀರಿಸದ ವಂಚಕ ಎಂದು ಸಂದೇಶ ರವಾನೆ ಮಾಡುತ್ತಾರೆ
(5)ಕಾಂಟೆಕ್ಟ್ ಲೀಸ್ಟ್ ನಿಂದ ನಂಬರ್ ಪಡೆದು ಸಾಲ ಪಡೆದವರ ಫೋಟೋ ಅಂಟಿಸಿ ರವಾನೆ ಮಾಡುತ್ತಾರೆ
(6)ಸಾಲ ಪಡೆದು ಮರು ಪಾವತಿಸದ ಚೋರ್ ಫ್ರಾಡ್ ಎಂದು ಹೆಸರು ಕೊಟ್ಟು ಮಾನ ಹಾನಿ ಮಾಡುತ್ತಾರೆ
(7)ಕಾಂಟೆಕ್ಟ್ ಲಿಸ್ಟ್ ನಲ್ಲಿದ್ದವರಿಗೆ ಕರೆಮಾಡಿ ನೀವು ಶೂರಿಟಿಗೆ ಸಹಿ ಹಾಕಿದ್ದೀರೆಂದು ಕಿರುಕುಳನೀಡುತ್ತಾರೆ ಎಂದು ಮಾಹಿತಿ ತಿಳಿದು ಬಂದಿದೆ
ನಕಲಿ ಆಪ್ ಪತ್ತೆ ಹೇಗೆ
(1)ಸಾಲ ಕೊಡುವ ಸಂಸ್ಥೆ ಆರ್, ಬಿ, ಐ,ನಡಿ ನೊಂದಣಿ ಆಗಿದೆಯೇ ಎಂದು ಪರಿಶೀಲಿಸಿಕೊಳ್ಳಬೇಕು
(2)ಆಪ್ ನ ರೇಟಿಂಗ್ /ರಿವ್ಯೂ ನೋಡಿ ಇತರರು ಹಂಚಿಕೊಂಡ ಅಭಿಪ್ರಾಯಗಳನ್ನು ಪರಿಶೀಲಿಸಿಕೊಳ್ಳಬೇಕು
(3)ಮೊಬೈಲ್ ನ ಗ್ಯಾಲರಿ ಹಾಗೂ ಕಾಂಟೆಕ್ಟ್ ಲಿಸ್ಟ್ ಸಂಪರ್ಕಕ್ಕೆ ಅನುಮತಿ ಕೇಳಿದರೆ ಕೊಡಬೇಡಿ
(4)ಸಾಲ ಕೊಡುವ ಆಪ್ ನ ವಿವರ ತಿಳಿದುಕೊಳ್ಳಿ ವಿಳಾಸವನ್ನು ಪರಿಶೀಲಿಸಿಕೊಳ್ಳಿ
(5)ಜಿ ಎಸ್ ಟಿ ಪ್ರೊಸೆಸ್ಸಿಂಗ್ ಶುಲ್ಕದ ಹೆಸರಲ್ಲಿ ಮುಂಚಿತವಾಗಿಯೇ ಶುಲ್ಕ ಪಡೆದರೆ ಎಚ್ಚರ ವಹಿಸಿ ಎಂದು ಉಪಯುಕ್ತ ಮಾಹಿತಿ ನೀಡಿದ್ದಾರೆ