ಬಣಕಲ್ :ಅಧಿಕಾರಿಗಳಾಗಲಿ ಪೊಲೀಸರಾಗಲಿ ರಾಜಕಾರಣಿಗಳಾಗಲಿ ನಿಷ್ಠಾವಂತ ಅಧಿಕಾರಿಗಳು ಇರುತ್ತಾರೆ.. ಹಾಗೆಯೇ ಐಶಾರಾಮಿಯಾಗಿ ಜೀವನ ಸಾಗಿಸಲು ಏನು ಬೇಕೋ ಎಲ್ಲವನ್ನೂ ಮಾಡಿಕೊಳ್ಳುವಂತಹವರೂ ಇರುತ್ತಾರೆ.. ಆದರೆ ಇಲ್ಲೊಬ್ಬರು ದಿಟ್ಟ ಮಹಿಳಾ ಪಿ,ಎಸ್,ಐ ನಿಜಕ್ಕೂ ಅವರ ಮೇಲೆ ನಮಗೆ ಹೆಮ್ಮೆ ಪಡುವಂತೆ ಮಾಡಿದೆ.. ಅಷ್ಟಕ್ಕೂ ಇವರು ಯಾರು.. ಇವರು ಮಾಡಿರುವ ಕೆಲಸ ಎಂತಹುದು ನೋಡಿದರೆ ನಿಜಕ್ಕೂ ಹ್ಯಾಟ್ಸ್ ಆಫ್ ಹೇಳಲೇಬೇಕೆನಿಸುತ್ತದೆ.. ಹೌದು ಇವರು ಬೆರಾರು ಅಲ್ಲಾ ನಮ್ಮ ನಿಮ್ಮೆಲ್ಲರ ನಡುವೆ ಇರುವ ನಮ್ಮ ಹೆಮ್ಮೆಯ ಬಣಕಲ್ ಠಾಣಾ ಮಹಿಳಾ ಪಿ,ಎಸ್,ಐ, ಅಗಿ ಕಾರ್ಯ ನಿರ್ವಹಿಸುತ್ತಿರುವ ಗಾಯಿತ್ರಿರವರು .ಇಂದು ಅಧಿಕಾರ ಸಿಕ್ಕ ಕೂಡಲೇ ತಮ್ಮ ಕಾರ್ಯ ಮರೆತು ನಿರಂಕುಶರಾಗಿ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವವರೇ ಹೆಚ್ಚಾಗಿದ್ದಾರೆ ಅಂತಹ ಭ್ರಷ್ಟ ಅಧಿಕಾರಿಗಳ ನಡುವೆ ಬಣಕಲ್ ಪೊಲೀಸ್ ಇಲಾಖೆಯ ಗಾಯಿತ್ರಿರವರು ತನ್ನ ನಿಷ್ಠಾವಂತ ದಕ್ಷ ಸೇವೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ, ಗಾಯಿತ್ರಿ ಅವರು ಸೇವೆಗೆ ಸೇರಿದ ಅವದಿಯಿಂದ ಇಂದಿನವರೆಗೂ ಪೊಲೀಸ್ ಇಲಾಖೆಯಲ್ಲಿ ಉತ್ತಮ ಕರ್ತವ್ಯ ಪ್ರಜ್ಞೆ ಹಾಗೂ ನಿಷ್ಠೆಯಿಂದ ಕರ್ತವ್ಯ ಪಾಲನೆ ಮಾಡುವ ಮೂಲಕ ಸಮಾಜದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ, ಗಾಯಿತ್ರಿ ಅವರು ಬಣಕಲ್ ಠಾಣೆಗೆ ಬಂದು ವರ್ಷಗಳೇ ಉರುಳಿವೆ ಅದರೊಳಗೆ ಇವರು ಮಾಡಿರುವ ಕಾರ್ಯ ನಿಷ್ಠೆಗೆ ಬಣಕಲ್ ಜನತೆ ಬಹುಪರಾಕ್ ಎಂದಿದ್ದಾರೆ,..ಯಾರಲ್ಲೂ ವೈರತ್ವ ಕಟ್ಟಿಕೊಳ್ಳದೆ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಾ ಜನ ಸ್ನೇಹಿಯಾಗಿದ್ದಾರೆ,ಪೊಲೀಸರು ಎಂದರೆ ದರ್ಪ ತೋರಿಸುತ್ತಾರೆ ದೌರ್ಜನ್ಯ ಎಸಗುತ್ತಾರೆ ಎಂಬುದು ಜನರ ಭಾವನೆ,ಆದರೆ ಪೊಲೀಸರಿಗೂ ಭಾವನೆಗಳಿವೆ ಪೊಲೀಸರಲ್ಲೂ ಒಳ್ಳೆಯ ಜನರಿದ್ದಾರೆ ಎಂಬುದನ್ನು ಒಬ್ಬ ಹೆಣ್ಣು ಮಗಳಾಗಿ ತೋರಿಸಿಕೊಟ್ಟಿದ್ದಾರೆ, ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಹಲವು ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಹಲವಾರು ಅಕ್ರಮ ಚಟುವಟಿಕೆಗಳು ಅಪರಾಧಗಳನ್ನು ನಿಯಂತ್ರಣಕ್ಕೆ ತಂದಿದ್ದಾರೆ, ಪುರುಷರಿಗಿಂತ ಮಹಿಳೆ ಯಾವುದೇ ಕ್ಷೇತ್ರ ಆದರೂ ಸರಿ ಯಾವುದರಲ್ಲೂ ಕಡಿಮೇಯಿಲ್ಲ ಎಂಬುದನ್ನು ಸಾದಿಸಿ ತೋರಿಸಿದ್ದಾರೆ,ತನ್ನ ವ್ಯಾಪ್ತಿಯಲ್ಲಿ ಬರುವ ಸಣ್ಣ ಪುಟ್ಟ ಪ್ರಕರಣಗಳನ್ನು ಠಾಣೆಯಲ್ಲೇ ರಾಜಿ ಸಂಧಾನದ ಮೂಲಕ ಬಗೆಹರಿಸಿದ್ದಾರೆ,, ಯಾರನ್ನೂ ಸಹ ಹೆದರಿಸಿ ಬೆದರಿಸಿ ಮಾತನಾಡದೆ ಸೌಮ್ಯ ರೀತಿಯಲ್ಲಿ ಜನರೊಂದಿಗೆ ಬೆರೆಯುತ್ತಿದ್ದಾರೆ ಯಾರೆ ಠಾಣೆಗೆ ಬಂದರೂ ಅವರನ್ನು ನಗು ಮೊಗದಿಂದ ಮಾತಾಡಿಸುತ್ತಾರೆ. ಸಾರ್ವಜನಿಕ ದೂರು ದುಮ್ಮಾನಗಳಿಗೆ ಪ್ರಾಮಾಣಿಕತೆಯಿಂದ ಸ್ಪಂದಿಸುವ ಮನೋಭಾವಕ್ಕೆ ಜನ ಮೆಚ್ಚುಗೆ ಗಳಿಸಿದ್ದಾರೆ,ಪತ್ರಿಕೆಯೊಂದಿಗೆ ಮಾತನಾಡಿದ ಅವರು ನಿಜಕ್ಕೂ ನೀವು ಒಳ್ಳೆಯ ಕೆಲಸ ಮಾಡಿದರೆ ಕೊನೆವರೆಗೂ ನಿಮ್ಮೊಂದಿಗಿರುತ್ತೇನೆ ನೀವು ಕೆಟ್ಟ ಕೆಲಸಮಾಡಿದರೂ ಕೊನೆವರೆಗೆ ನಿಮ್ಮನ್ನು ಬಿಡದೆ ಕಾಡುತ್ತೇನೆ..!ಹೀಗೆ ಅಪರಾಧ ಕೃತ್ಯದಲ್ಲಿ ತೊಡಗುವವರಿಗೆ ಕಟ್ಟು ನಿಟ್ಟಿನ ಎಚ್ಚರಿಕೆ ಕೂಡ ನೀಡುತ್ತಿದ್ದಾರೆ ಬಣಕಲ್ ಠಾಣೆಗೆ ಮಹಿಳಾ ಪಿ,ಎಸ್,ಐ ಅಗಿ ಬಂದ ಮೊದಲ ಮಹಿಳೆ ಎಂಬುದು ಕೂಡ ಬಣಕಲ್ ನ ಹೆಮ್ಮೆಯ ಪಿಎಸ್ ಐ ಗಾಯಿತ್ರಿ ಅವರ ಹೆಸರಿನಲ್ಲಿದೆ ಎಂಬುದು ವಿಶೇಷ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸಾಧನೆ ಮಾಡಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂಬ ಹೆಸರು ಗಳಿಸಿ ಇನ್ನೂ ಉನ್ನತ ಹುದ್ದೆಯನ್ನು ಅಲಂಕರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂಬುದು ಬಣಕಲ್ ಜನತೆ ಹಾಗೂ ಪತ್ರಿಕೆ ವತಿಯಿಂದ ಶುಭ ಹಾರೈಸುತ್ತೇವೆ.
ವರದಿ: ಸೂರಿ ಬಣಕಲ್
