ಬಣಕಲ್ :ಬಣಕಲ್ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 15ವಾರ್ಡ್ ನಲ್ಲಿ 10ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ..ಬಿಜೆಪಿ ಭದ್ರ ಕೋಟೆಯಾಗಿದ್ದ ಬಣಕಲ್(1)ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಛಾಪನ್ನು ಹೊತ್ತಿದೆ ಇದು ಕಾರ್ಯಕರ್ತರಲ್ಲಿ ಹುಮ್ಮಸ್ಸು ಹಿಮ್ಮಡಿಯಾಗಿದೆ.. ಬಣಕಲ್ ಕ್ಷೇತ್ರ ಹಾಗೂ ಕೂಡಹಳ್ಳಿ ಕ್ಷೇತ್ರ ಒಂದೇ ಪಕ್ಷಕ್ಕೆ ಮಣೆ ಹಾಕುತ್ತ ಬಂದಿದೆ ಆದರೆ ಈ ಭಾರಿ ಮಾತ್ರ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮತದಾರರು ನೀಡಿದ ತೀರ್ಪಿನಿಂದ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.15ಅಭ್ಯರ್ಥಿಗಳ ಪೈಕಿ ಕೇವಲ ಐವರು ಅಭ್ಯರ್ಥಿಗಳು ಗೆಲುವು ಪಡೆಯುವ ಮೂಲಕ ಬಣಕಲ್ ಗ್ರಾಮಪಂಚಾಯಿತಿ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ಜಾರಿದೆ ಬಿಜೆಪಿ ಹಿಡಿತದಲ್ಲಿದ್ದ ಬಣಕಲ್ ಕ್ಷೇತ್ರದಲ್ಲಿ ನಾಲ್ಕಕ್ಕೆ ನಾಲ್ಕೂ ಸ್ಥಾನ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವ ಪಡೆಯುವ ಮೂಲಕ ಬಿಜೆಪಿ ಭದ್ರ ಕೋಟೆಯನ್ನು ಛಿದ್ರಮಾಡಿದ್ದಾರೆ
ಗ್ರಾಮಗಳಲ್ಲಿ ಜನಾದೇಶ ಬಿಜೆಪಿಯತ್ತ ಸಾಗುತ್ತಿದೆ,ಎಂದುಕೊಂಡವರಿಗೆ ಈ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾರ ಪ್ರಭು ಸರಿಯಾಗೆ ಪಾಠ ಕಲಿಸಿದ್ದಾರೆ ಹೆಗ್ಗುಡ್ಲು ಕ್ಷೇತ್ರ ದಲ್ಲಿ 2ಬಿಜೆಪಿ 1ಕಾಂಗ್ರೆಸ್ ಬಣಕಲ್ 2ಕ್ಷೇತ್ರದಲ್ಲಿ ಬಿಜೆಪಿ 3 ಕಾಂಗ್ರೆಸ್ 1ಸ್ಥಾನ ಪಡೆದರೆ ಕೂಡಹಳ್ಳಿ ಕ್ಷೇತ್ರ ನಾಲ್ಕೂ ಸ್ಥಾನದಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದೆ. ಒಟ್ಟಾರೆ ಈ ಚುನಾವಣೆ ಕಾಂಗ್ರೆಸ್ಸಿಗರಿಗೆ ಲಾಭವಾದರೆ ಬಿಜೆಪಿಗೆ ತುಂಬಾ ನಷ್ಟ ಉಂಟಾಗಿದೆ.ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಮಧುಕುಮಾರ್. ಅದಂ ಕುಟ್ಟ. ಲೀಲಾವತಿ. ಸುಜಾತ ದಿನೇಶ್. ಇರ್ಫಾನ್.ಅತೀಖ ಭಾನು.ಝರಿನ. ವಿನಯ್ ಕುಮಾರ್.ಸಿರಾಜ್. ರತ್ನ ಜಯಗಳಿಸಿದ್ದಾರೆ.5ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸರೋಜ. ರೇಣುಕಾ. ಸುರೇಶ್. ಸುನೀತಾ. ತಾರನಾಥ್. ಗೆಲುವು ಸಾಧಿಸಿದ್ದಾರೆ.
