ಬಣಕಲ್ :ಹೆಲಿಕಾಪ್ಟರ್ ಅಪಘಾತದಿಂದ ಮೃತರಾದ ಮೊಟ್ಟ ಮೊದಲ ಭಾರತೀಯ ಸೇನೆಯ ಮೂರು ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಸೇರಿದಂತೆ 11 ಜನರಿಗೆ ಬಣಕಲ್ ಪಟ್ಟಣದ ಸಮುದಾಯ ಭವನದಲ್ಲಿ ಸಂತಾಪ ಸೂಚಿಸಲಾಯಿತು.
ನುಡಿನಮನದ ಮೂಲಕ ಶ್ರದ್ದಾಂಜಲಿ ಸಲ್ಲಿಸಿ, ಮೌನಾಚರಣೆ ಮೂಲಕ ಎಲ್ಲಾ ಮೃತರ ಆತ್ಮಕ್ಕೆ ಸದ್ಗತಿ ಕೋರಲಾಯಿತು.
ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಭಾರತೀಯ ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಹಾಗೂ ಸೇನಾ ಪಡೆಯ ಸಿಬ್ಬಂದಿ ಮೃತಪಟ್ಟಿರುವುದಕ್ಕೆ ಬಣಕಲ್ ಪ್ರೆಂಡ್ಸ್ ಕ್ಲಬ್ ನ ಗೌರವ ಅಧ್ಯಕ್ಷರಾದ ಪ್ರವೀಣ್ ಗೌಡ ಅವರು
ಈ ವಿಚಾರವಾಗಿ ಮಾತನಾಡಿ ತಮಿಳುನಾಡಿನ ಕೊನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್, ಅವರ ಪತ್ನಿ ಹಾಗೂ ಸೇನಾ ಪಡೆಯ ಇತರ ಸಿಬ್ಬಂದಿ ಮೃತಪಟ್ಟಿರುವುದು ಆಘಾತದ ಸಂಗತಿಯಾಗಿದ್ದು, ದೇಶಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದರು.
ನಿವೃತ ಯೋಧ ದಿನೇಶ್ ಮಾತನಾಡಿ ದೇಶದ ರಕ್ಷಣಾ ವಲಯಕ್ಕೆ ಸಿಡಿಎಸ್ ರಾವತ್ ಅವರ ಕೊಡುಗೆ, ನಿಸ್ವಾರ್ಥ ಸೇವೆ ಸ್ಮರಣೀಯ. ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ದೊರೆಯಲಿ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಅರುಣ್ ಪೂಜಾರಿ. ಕಾರ್ಯದರ್ಶಿ ನಿಶಾಂತ್. ಖಜಾಂಚಿ ಸೂರಿ.ಹಸೈನಾರ್. ವಿಶ್ವನಾಥ್. ಅರುಣ್ ರೋಡ್ರಿಗಸ್.ಅಶೋಕ, ಶ್ರಮಜೀವಿ ಆಟೋ ಚಾಲಕರ ಮಾಲಕರ ಸಂಘದ ಪದಾಧಿಕಾರಿಗಳು. ಸಂಭ್ರಮ್ ಮಹೇಶ್ ಗೌಡ. ಮೋಹನ್. ಸಮಾಜ ಸೇವಕ ಆರೀಫ್.ಹಾಗೂ ಸಾರ್ವಜನಿಕರು ಭಾಗವಹಿಸಿದರು