ಭಾರಿ ಮಳೆಗೆ ಮನೆಗೋಡೆ ಕುಸಿತ ವ್ಯಕ್ತಿ ಮೃತ್ಯು


ಚಿಕ್ಕಮಗಳೂರು: ವರುಣನ ಅಬ್ಬರಕ್ಕೆ ಕರುನಾಡು ಕಂಗೆಟ್ಟಿದೆ.
ನಿರಂತರ ಮಳೆಯಿಂದ ಮನೆಗೋಡೆ ಕುಸಿದು ವ್ಯಕ್ತಿ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಯಗಟಿಪುರ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್(45) ಮೃತ ದುರ್ದೈವಿ. ಮಲಗಿದ್ದ ವ್ಯಕ್ತಿ ಮೇಲೆ ಮನೆಗೋಡೆ ಕುಸಿದುಬಿದ್ದಿದ್ದು ವ್ಯಕ್ತಿ ಮೃತಪಟ್ಟಿದ್ದಾನೆ. ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.