ಬಣಕಲ್ ಮೊಹಿದಿನ್ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

ಬಣಕಲ್ :ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ಜನ್ಮ ದಿನವಾದ ಈದ್‌ ಮಿಲಾದುನ್ನಬಿಯನ್ನು ಮುಸ್ಲಿಂ ಬಾಂದವರು ಇಂದು ಸಡಗರ ಸಂಭ್ರಮದಿಂದ ಬಣಕಲ್ ಮೋಹಿದಿನ್ ಜುಮ್ಮಾ ಮಸೀದಿಯಲ್ಲಿ ಆಚರಿಸಿದರು .
ಪೈಗಂಬರರು ಲೋಕಕ್ಕೆ ಸಾರಿದ ಪ್ರೀತಿ, ವಿಶ್ವಾಸ, ಆತ್ಮೀಯತೆ, ಪರಧರ್ಮ ಸಹಿಷ್ಣುತೆ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರತಿಜ್ಞೆ ಮಾಡಿದರು. ಈ ವೇಳೆ ಲಘು ಪಾನೀಯ ಹಾಗೂ ಸಿಹಿ ತಿಂಡಿಗಳನ್ನು ಹಂಚಿ ಪರಸ್ಪರ ಶುಭ ಕೋರಿ ಆತ್ಮೀಯತೆ ಹಾಗೂ ಭಾವೈಕ್ಯತೆ ಮೆರೆದ ದೃಶ್ಯ ಕಂಡು ಬಂದಿತು.