ಮೂಡಿಗೆರೆ:ನಿಡುವಾಳೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಅಂಗನವಾಡಿ ಶಿಕ್ಷಕಿಯರು ನಿಡುವಾಳೆ ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಚಂದ್ರವತಿ ಅವರ ಸೇವೆಗೆ ಅಂಗನವಾಡಿ ಶಿಕ್ಷಕಿಯವರಿಂದ ಅಭಿವೃದ್ಧಿ ಅಧಿಕಾರಿ ಅವರಿಗೆ ಗೌರವ ಸಲ್ಲಿಸಿದರು.ನಿಡುವಾಳೆ ಗ್ರಾಮ ಪಂಚಾಯತಿಯಲ್ಲಿ ಸೇವೆ ಸಲ್ಲಿಸುತ್ತ ಇರುವ ಅಭಿವೃದ್ಧಿ ಅಧಿಕಾರಿ ಚಂದ್ರವತಿ ಅವರು ನಿಡುವಾಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಭಿವೃದ್ಧಿ ಅಧಿಕಾರಿ ಚಂದ್ರವತಿ ಅವರು ಈ ಭಾಗದ ಅಂಗನವಾಡಿಯಲ್ಲಿ ಎಲ್ಲಾ ಕಾರ್ಯಕ್ರಮ ನಡೆಸಲು ಹೆಚ್ಚುಹೆಚ್ಚಾಗಿ ಪ್ರೋತ್ಸಾಹ ನೀಡುತ್ತಿದ್ದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ ಅಂಗನವಾಡಿಗಳಿಗೆ ಬರುವ ಎಲ್ಲಾ ರೀತಿಯ ಯೊಜನೆ ಕಾಮಗಾರಿಯನ್ನು ಸಂಬಂಧಪಟ್ಟ ಅಂಗನವಾಡಿ ನೀಡಿ ಅ ಭಾಗದ ಅಂಗನವಾಡಿಗಳನ್ನು ಆಕರ್ಷಣೆಯಾಗಿ ಮಾಡುವಲ್ಲಿ ಅ ಭಾಗದ ಸದಸ್ಯರುಗಳ ಜೊತೆಗೆ ಸೇರಿ ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ ಹಾಗೂ ಇವರ ಅಭಿವೃದ್ಧಿ ಕಾಮಗಾರಿಯ ಕೆಲಸಗಳು ಹೆಚ್ಚಾಗಿ ಅಂಗನವಾಡಿಗಳಿಗೆ ಸಿಕ್ಕಿ ಅಂಗನವಾಡಿಗಳಿಗೆ ಬರುವ ಮಕ್ಕಳು ತಪ್ಪದೆ ಅಂಗನವಾಡಿಗೆ ಬರುವುದರಿಂದ ಅ ಭಾಗದ ಪೋಷಕರು ಹೆಚ್ಚಾಗಿ ಮಕ್ಕಳನ್ನು ಅಂಗನವಾಡಿಗೆ ಕಳಿಸುವಲ್ಲಿ ಯಶಸ್ವಿಯಾಗಿರುತ್ತಾರೆ ಅಂಗನವಾಡಿಗಳನ್ನು ಹೆಚ್ಚಾಗಿ ಅಭಿವೃದ್ಧಿ ಪಡಿಸಿಕೊಟ್ಟ ಅಭಿವೃದ್ಧಿ ಅಧಿಕಾರಿಯನ್ನು ಗೌರವ ಪೂರ್ವಕವಾಗಿ ಅಭಿನಂದಿಸಿದರು ಈ ಪೋಷಣ ಮಾಸಚರಣೆ ಕಾರ್ಯಕ್ರಮದಲ್ಲಿ ನಿಡುವಾಳೆ ವ್ಯಾಪ್ತಿಗೆ ಬರುವ ಗರ್ಭಿಣಿವರಿಗೆ ಸೀಮಂತ ಕಾರ್ಯಕ್ರಮ ಮಾಡಿದರು ಹಾಗೂ ಈ ಪೋಷಣ ಮಾಸಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಗರ್ಭಿಣಿ ಬಾಣಂತಿಯರಿಗೆ ಆಹಾರ ಪದಾರ್ಥಗಳ ಬಳಕೆ ಹೆಚ್ಚಾಗಿ ಮಾಡಬೇಕೆಂದು ನಿಡುವಾಳೆ ಗ್ರಾಮ ಪಂಚಾಯತಿ ಅದ್ಯಕ್ಷರಾದ ಶ್ರೀಯುತ ಶೃತಿ ಅವರು ಮಾಹಿತಿ ನೀಡಿದರು ಹಾಗೂ ಈ ಕಾರ್ಯಕ್ರಮದಲ್ಲಿ ಮೂಡಿಗೆರೆ ತಾಲ್ಲೂಕು ವೃತ್ತ ಮೇಲ್ವಿಚಾರಕಿ ಆದ ಶ್ವೇತ ಅವರು ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಲ್ಲಿ ಕಾರಣಕರ್ತರಾದರು ಮತ್ತು ಗ್ರಾಮ ಪಂಚಾಯತಿ ಉಪಧ್ಯಾಕ್ಷರು ಆದ ನವೀನ್ ಹಾವಳಿ,ಸಚಿನ್ ಮರ್ಕಲ್,ಅರುಣ್ ಅವರು ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
