
ಪ್ರಾಮಾಣಿಕತೆ ಬಗ್ಗೆ ಭಾಷಣ ಮತ್ತು ಮಾತುಗಳಲ್ಲಿ ನಿತ್ಯವೂ ಕೇಳುತ್ತೇವೆ, ಓದುತ್ತೇವೆ. ಆದರೆ ಆಚರಣೆ ಮಾತ್ರ ಅಪರೂಪ ಅಂತಹ ಒಂದ ಅಪರೂಪ ಇಲ್ಲಿದೆ. ನಜರತ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಬಿ ಆರ್ ರಂಶಿದ್ ದಾರಿಯಲ್ಲಿ ದೊರೆತ ಮೊಬೈಲ್ ಅನ್ನು ಕಳೆದುಕೊಂಡವರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ.
ಇಲ್ಲಿಯ ಕುವೆಂಪು ನಗರದ ಸುಂದರ್ ಆಚಾರ್ ಅವರು ಬೆಳಿಗ್ಗೆ ಕೆಲಸದ ನಿಮಿತ್ತ ಹೋದಾಗ ಕಿಸೆಯಿಂದ ಏನೋ ತೆಗೆಯುವಾಗ ಹೇಗೋ ಕಿಸೆಯಲ್ಲಿದ್ದ ಮೊಬೈಲ್ ಬಿದ್ದು ಹೋಗಿವೆ. ಕಿಸೆಗೆ ಕೈ ಹಾಕಿದಾಗ ಮೊಬೈಲ್ ಇಲ್ಲದ್ದರ ಅರಿವಾಗಿ , ಎಲ್ಲೆಡೆಯೂ ಹುಡುಕಿದ್ದಾರೆ ಮೊಬೈಲ್ ಸಿಕ್ಕದಿದ್ದಾಗ ಮನೆಗೆ ಮರಳಿದ್ದಾರೆ ರಫೀಕ್ ದಂಪತಿಗಳ ಪುತ್ರನಾಗಿರುವ ರಂಶಿದ್ ಶಾಲೆಯಿಂದ ಮರಳುತ್ತಿದ್ದಾಗ ದಾರಿ ಮದ್ಯೆ ಮೊಬೈಲ್ ಕಣ್ಣಿಗೆ ಬಿದ್ದಿದೆ ಅದನ್ನು ಹಾಗೆ ತೆಗೆದುಕೊಂಡು ಬಂದು ಅದರಲ್ಲಿ ಮಾಲೀಕರ ಹೆಸರನ್ನು ಪತ್ತೆ ಹಚ್ಚಿ ತಕ್ಷಣಕ್ಕೆ ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ
`ಹಣ ಎಂದರೆ ಹೆಣವೂ ಬಾಯಿ ಬಿಡುವುದು ‘ ಎಂಬ ಗಾದೆ ಮಾತಿದೆ. ಮತ್ತೊಬ್ಬರ ಕಿಸೆಗೆ ಕೈಹಾಕುವ ಬಗ್ಗೆ ಸದಾ ಹೊಂಚು ಹಾಕುವ ಇಂದಿನ ದಿನಗಳಲ್ಲಿ ಶಾಲಾ ಬಾಲಕ ರಂಶಿದ್ ನ ಪ್ರಾಮಾಣಿಕತೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ