ಜಿಲ್ಲಾ ಮಟ್ಟದ ರಿಲೆಯಲ್ಲಿ ಬಾಳೆಹೊನ್ನೂರು ನಿರ್ಮಲಾ ಇಂಗ್ಲೀಷ್ ಮಾಧ್ಯಮ ಶಾಲೆಯ ಸಂಹಿತಾ ಬಿ. ಮತ್ತು ಅನ್ಸಿಟಾ ಡಿಸೋಜ ಸಾಧನೆ -ರಾಜ್ಯ ಮಟ್ಟಕ್ಕೆ ಆಯ್ಕೆ

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟ 4×100ರಿಲೆಯಲ್ಲಿ ಬಾಳೆಹೊನ್ನೂರು ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ
ಸಂಹಿತಾ ಬಿ. ಮತ್ತು ಅನ್ಸಿಟಾ ಡಿಸೋಜ ಪ್ರಥಮ ಸ್ಥಾನ ಪಡೆದು
ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗ್ರಾಮೀಣ ಭಾಗದ ಚೆಂದುವಳ್ಳಿಯ ವಿದ್ಯಾರ್ಥಿನಿಯರಿಬ್ಬರು ತಮ್ಮ ಪ್ರತಿಭೆಯ ಮೂಲಕ ಜಿಲ್ಲಾ ಮಟ್ಟದಲ್ಲಿ ಗೆಲುವು ಸಾಧಿಸಿ, ರಾಜ್ಯ ಮಟ್ಟದ ಸ್ಪರ್ಧೆಗೆ ಲಗ್ಗೆ ಇಟ್ಟಿರುವುದು ಇಡೀ ಶಾಲೆಗೆ ಹಾಗೂ ಸ್ಥಳೀಯರಿಗೆ ಹೆಮ್ಮೆಯ ವಿಷಯವಾಗಿದೆ.


ವರದಿ ✍️ಸೂರಿ ಬಣಕಲ್