ಬಣಕಲ್ :ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಘಟಕದ ವತಿಯಿಂದ ಶಿಕ್ಷಣದ ಜೊತೆಗೆ ಸಾಹಿತ್ಯದ ಬೆಸುಗೆ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಪ್ರೇಮಾರವರಿಗೆ ಅಭಿನಂದನಾ ಸಮಾರಂಭವನ್ನು ಬಗ್ಗಸ ಗೂಡು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಾಗರಾಜ್ ಮುಖ್ಯ ಶಿಕ್ಷಕರು ವಿದ್ಯಾ ಭಾರತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಣಕಲ್.ಇವರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಅತಿಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು ಬಗ್ಗಸಗೋಡು ಹಿರಿಯ ಪ್ರಾಥಮಿಕ ಶಾಲೆ ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಒಂದು ಸರ್ಕಾರಿ ಶಾಲೆ ನಡೆಸುತ್ತಿರುವ ಶಾಲೆ ಹಾಗಾಗಿ ಪ್ರೇಮಾ ಮೇಡಂ ಅವರಿಗೆ ಈ ಗೌರವ ಬಂದಿದೆ ಎಂದು ನುಡಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷರಾ ಜಾಬೀರ್ ಹುಸೇನ್ ಮಾತನಾಡಿ ನಮ್ಮ ಶಾಲೆಯಲ್ಲಿ ಇವತ್ತು ಮಕ್ಕಳ ಸಂಖ್ಯೆ ಹೆಚ್ಚು ಆಗಲು ಪ್ರೇಮಾ ಮೇಡಂ ಸಾಕಷ್ಟು ಶ್ರಮವಹಿಸಿದ್ದಾರೆ ಶಾಲೆ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ ಹಾಗಾಗಿ ಅವರಿಗೆ ಬಂದ ಪ್ರಶಸ್ತಿ ನಮ್ಮ ಶಾಲೆಗೆ ನಮ್ಮ ತಾಲೂಕಿಗೆ ಹೆಮ್ಮೆ ತಂದುಕೂಟ್ಟಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲೋಕೇಶ್ ಬೆಟ್ಟಗೆರೆ ಮಾತನಾಡಿ ಸರ್ಕಾರಿ ಶಾಲೆಗಳು ಮುಚ್ಚಲು ಸಂಖ್ಯೆ ಆಧರಿಸಿ ಶಿಕ್ಷಕರನ್ನು ನಿಡುವ ಸರ್ಕಾರದ ಕ್ರಮವನ್ನು ಬಿಟ್ಟು ಎಲ್ಲಾ 6 ಸಬ್ಜೆಕ್ಟ್ ಗೂ ಶಿಕ್ಷಕರು ಒಂದು ಪಿ.ಟಿ.ಶಿಕ್ಷಕರನ್ನು ಸರ್ಕಾರ ನೆಮಿಸಬೇಕು ಆಗ ಸರ್ಕಾರಿ ಶಾಲೆಗಳು ಉಳಿಯುತ್ತದೆ ಅದರ ನಡುವೆ ಸಾಧನೆ ಮಾಡುತ್ತಿರುವ ಬಗ್ಗಸಗೋಡು ಹಿರಿಯ ಪ್ರಾಥಮಿಕ ಶಾಲೆ ಕ್ರೀಡೆಯಲ್ಲಿ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಪ್ರೇಮಾ ಮೇಡಂ ಅವರ ಸಾಧನೆ ಇಂದ ನಮ್ಮ ಹೋಬಳಿಗೆ ಗೌರವ ತಂದಿದೆ ಅವರು ಒಬ್ಬ ಆದರ್ಶ ಶಿಕ್ಷಕಿ ಎಂದು ನುಡಿದರು.
ಗೌರವ ಸ್ವೀಕರಿಸಿದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಪ್ರೇಮಾ ಶಿಕ್ಷಕಿ ಮಾತನಾಡಿ ಈ ಗೌರವಕ್ಕೆ ಎಸ್.ಡಿ.ಎಂ.ಸಿ. ಅಧ್ಯಕ್ಷರು ಸದಸ್ಯರು ನನ್ನ ಶಾಲೆಯ ಮುಖ್ಯ ಶಿಕ್ಷಕರು ಸಹಾ ಶಿಕ್ಷಕರು ಕಾರಣ ಅಧ್ಯಕ್ಷರು ತನ್ನ ಮಗುವನ್ನು ಖಾಸಗಿ ಶಾಲೆಯಿಂದ ನಮ್ಮ ಸರ್ಕಾರಿ ಶಾಲೆಗೆ ಸೇರಿಸಿದ್ದು ಮಕ್ಕಳ ಸಂಖ್ಯೆ ಹೆಚ್ಚು ಆಗಲು ಕಾರಣ ಹಾಗೆ ಖಾಸಗಿ ಶಾಲೆಗಳಂತೆ ಶಾಲಾ ವಾರ್ಷಿಕೋತ್ಸವ ನಡೆಸುತ್ತ ಬಂದಿರುವ ನಮ್ಮ ಶಾಲೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲು ಆಗಬೇಕು ಎಂದರು ಮುಖ್ಯ ಶಿಕ್ಷಕರು ಮಾತನಾಡಿ ಮುಂದಿನ ವರ್ಷ ನಮ್ಮ ಶಾಲೆಯಲ್ಲಿ ಎಲ್.ಕೆಜಿ.ಯು.ಕೆ.ಜಿ. ಪ್ರಾರಂಭ ಮಾಡುವ ಗುರಿ ಹೊಂದಿದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ. ಎಸ್ .ಡಿ.ಸಿ. ಸದಸ್ಯರಾದ ಪ್ರಸಾದ್ . ರಾಮಚಂದ್ರ . ಶಾಲಾ ಶಿಕ್ಷಕರು .ಗೌರವ ಕಾರ್ಯದರ್ಶಿಗಳಾದ. ಸುಪ್ರೀತ್ ಬೆಟ್ಟಗೆರೆ.ಭಕ್ತೇಶ್ ಶಿಕ್ಷಕರು. ಕಾರ್ಯಕ್ರಮ ನಿರೂಪಿಸಿ. ಹೊಂದಿಸಿದರು.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ