
ಕರ್ನಾಟಕದ ಹೆಸರಾಂತ ಚಾನೆಲ್ “Zee ಕನ್ನಡ ” ನಡೆಸುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್ ಶೊ ಗೆ ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿ ಸುಭಾಷ್ ನಗರ ವಾಸಿ ಪ್ರಶಾಂತ್ ಪೂಜಾರಿ ಅವರ ಪತ್ನಿ ಶ್ರೀಮತಿ ನಿರೀಕ್ಷಾ ಕೋಟ್ಯಾನ್ ಅವರು ಆಯ್ಕೆಯಾಗುವುದರ ಮೂಲಕ ಗಮನ ಸೆಳೆದಿದ್ದಾರೆ.
ಮೂಡಿಗೆರೆಯ ಡ್ಯಾನ್ಸ್ ಮಾಸ್ಟರ್ ಆದಿ ಅವರ ಮಾರ್ಗದರ್ಶನದಲ್ಲಿ ಪರಿಣಿತರಾಗಿ ಚಿಕ್ಕಮಗಳೂರಿನಲ್ಲಿ ನಡೆದ ಆಡಿಷನ್ ಅಲ್ಲಿ ಆಯ್ಕೆಯಾಗಿ ನಂತರ ಬೆಂಗಳೂರಿನಲ್ಲಿ ನಡೆದ ಆಡಿಷನ್ ಅಲ್ಲಿ 3000 ಸ್ಪರ್ದಿಗಳಲ್ಲಿ ಆಯ್ಕೆಯಾದ 25ರಲ್ಲಿ ಒಬ್ಬರಾಗಿ ಮೇಘ ಆಡಿಷನ್ 25 ಸ್ಪರ್ದಿಗಳಲ್ಲಿ 14ರಲ್ಲಿ ಒಬ್ಬರಾಗಿ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.
ಇದೆ ಶನಿವಾರ ಮತ್ತು ಭಾನುವಾರ Zee ಕನ್ನಡ ದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನವು ಪ್ರಸಾರವಾಗುತ್ತದೆ
ಇವರ ಈ ಸಾಧನೆಗೆ ತರಬೇತುದಾರ ಆದಿ ಮಾಸ್ಟರ್, ಕುಟುಂಬದ ಸದಸ್ಯರು ಮತ್ತು ಊರಿನ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ
ಆರ್ಥಿಕವಾಗಿ ಹಿಂದುಳಿದ ಬಡಕುಟುಂಬದ ಈ ಸ್ಪರ್ದಿಗೆ ಮುಂದಿನ ಹಂತ ತಲುಪಲು ಸಹಹೃದಯಿ ಮಿತ್ರರ ಸಹಾಯ ಅಗತ್ಯವಾಗಿದೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ