ರಸ್ತೆಯಿಂದ ತೆಗೆದ ಇಂಟರ್ ಲಾಕ್ ಪುನಃ ಅಳವಡಿಸಿ ಸಂಚಾರ ಯೋಗ್ಯವನ್ನಾಗಿಸಲು ತುರ್ತು ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರ ಅಗ್ರಹ

ಪ್ರತಿ ಮನೆಗೆ ದಿನದ 24 ಗಂಟೆ ನೀರು ನೀಡುವ ಉದ್ದೇಶದ ಜಲ ಜೀವನ್‌ ಮಿಷನ್‌ ಯೋಜನೆ, ಬಣಕಲ್ ಹೋಬಳಿ ವ್ಯಾಪ್ತಿಯ ಜನರ ಪಾಲಿಗೆ ಸಂಕಷ್ಟ ತಂದಿದೆ. ನಾನಾ ಗ್ರಾಮಗಳಲ್ಲಿ ನೀರು ಪೂರೈಸುವ ಪೈಪ್‌ಲೈನ್‌ ಅಳವಡಿಕೆಗೆ ಗುತ್ತಿಗೆದಾರರು ಚೆನ್ನಾಗಿದ್ದ ಎಲ್ಲಾ ರಸ್ತೆಗಳನ್ನು ಕಿತ್ತು ಹಾಕಿದ್ದು ಸಮಸ್ಯೆಅಲ್ಲ ಸರಿಪಡಿಸದೆ ಹಾಗೇ ಬಿಟ್ಟಿದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಮೂರೂ ತಿಂಗಳ ಹಿಂದೆ ಬಣಕಲ್ ಮತ್ತಿಕಟ್ಟೆ ರಸ್ತೆಯಲ್ಲಿ ಪೈಪ್‌ಲೈನ್‌ ಅಳವಡಿಕೆಗಾಗಿ ರಸ್ತೆ ಪಕ್ಕದ ಪುಟ್ ಪಾತ್ ಗೆ ಹಾಕಿದ್ದ ಇಂಟರ್ ಲಾಕ್ ಕಿತ್ತು ಪೈಪ್ ಲೈನ್ ಅಳವಡಿಕೆ ಮಾಡಿದ್ದಾರೆ ಆದರೆ ಕಾಮಗಾರಿ ನಂತರ ಇದುವರೆಗೂ ಸರಿಪಡಿಸುವ ಗೋಜಿಗೆ ಹೋಗಿಲ್ಲ.

ಕಾಮಗಾರಿ ಪೂರ್ಣಗೊಂಡ ಬಳಿಕ ರಿಪೇರಿ ಮಾಡಲಾಗುವುದು ಎಂದು ಗುತ್ತಿಗೆದಾರರು ಮತ್ತು ಅಧಿಕಾರಿಗಳು ಆಶ್ವಾಸನೆ ನೀಡಿದ್ದರು ಆದರೆ ಯಾವಾಗ ಎಂಬ ಬಗ್ಗೆ ಸ್ಪಷ್ಟ ಉತ್ತರವಿಲ್ಲ ಈಗ ಮಳೆಗಾಲ ಪ್ರಾರಂಭ ವಾಗಿದೆ ಸದ್ಯಕ್ಕೆ ಕಾಮಗಾರಿ ಮರೀಚಿಕೆ ಎನ್ನುತ್ತಾರೆ ಗ್ರಾಮಸ್ಥರು.

ಗುತ್ತಿಗೆದಾರರು ರಸ್ತೆಯನ್ನು ಸರಿಪಡಿಸದೆ ಹಲವಾರು ತಿಂಗಳುಗಳಿಂದ ಹಾಗೆಯೇ ಬಿಟ್ಟಿರುವುದರಿಂದ ಬಣಕಲ್ ಮತ್ತಿಕಟ್ಟೆ ರಸ್ತೆಯಲ್ಲಿ ದಿನನಿತ್ಯ ಟ್ರಾಫಿಕ್ ಜಾಮ್, ಹಲವಾರು ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಶಾಲಾ ಮಕ್ಕಳು ಸಾರ್ವಜನಿಕರು ರಸ್ತೆ ಬಿಟ್ಟು ಕಾಮಗಾರಿ ಮಾಡಿದ ಗುಂಡಿ ಬಿದ್ದ ರಸ್ತೆಯಲ್ಲಿ ನಡೆಯುವುದರಿಂದ ಆಯತಪ್ಪಿ ಬಿದ್ದಿದ್ದಾರೆ .

ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ರಸ್ತೆಯಿಂದ ತೆಗೆದ ಇಂಟರ್ ಲಾಕ್ ಪುನಃ ಅಳವಡಿಸಿ ಸಂಚಾರ ಯೋಗ್ಯವನ್ನಾಗಿಸಲು ತುರ್ತು ಕ್ರಮ ಜರುಗಿಸಬೇಕೆಂಬುದು ಗ್ರಾಮಸ್ಥರ ಅಗ್ರಹ.


ವರದಿ ✍️ಸೂರಿ ಬಣಕಲ್