ಪಾದಚಾರಿ ರಸ್ತೆಗಳ ಮೇಲೆ ಅನಧಿಕೃತ ಸಾಮಾನುಗಳನ್ನು ಇಟ್ಟು ಸಾರ್ವಜನಿಕರಿಗೆ ಓಡಾಡಲು ತೊಂದರೆ ಕೊಡುವವರ ವಿರುದ್ಧ ಕ್ರಮ ಪಿ.ಎಸ್.ಐ. ದಿಲೀಪ್ ಕುಮಾರ್

ಬಣಕಲ್ :ಪಾದಚಾರಿ ಮಾರ್ಗಗಳು ಸಾರ್ವಜನಿಕರ ಸುರಕ್ಷಿತ ನಡಿಗೆಗೆ ಮೀಸಲಾಗಿವೆ. ಇವುಗಳನ್ನು ಜಾಹೀರಾತು ಫಲಕಗಳು ಮತ್ತು ಕಟ್ಟಡ ಸಾಮಗಾ ಸಾಮಗ್ರಿಗಳಿಂದ ಒತ್ತುವರಿ ಮಾಡಿಕೊಳ್ಳುವುದರಿಂದ ಜನರಿಗೆ ತೊಂದರೆಯಾಗುತ್ತಿದೆ ಪಾದಚಾರಿ ರಸ್ತೆಯನ್ನು ಮುಕ್ತವಾಗಿ ಬಿಡಬೇಕು ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿದೆ.
ಆದಷ್ಟು ಬೇಗ ಅಂಗಡಿ ಮಾಲೀಕರು ತೆರವು ಗೊಳಿಸದೇ ಇದ್ದಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬಣಕಲ್ ಠಾಣಾ ಪಿ. ಎಸ್.ಐ. ದಿಲೀಪ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಪಾದಚಾರಿ ರಸ್ತೆಗಳ (Footpath) ಮೇಲೆ ಅನಧಿಕೃತವಾಗಿ ಸಾಮಾನುಗಳನ್ನು ಇಡುವುದು ಅಥವಾ ಅಂಗಡಿಗಳನ್ನು ವಿಸ್ತರಿಸುವುದನ್ನು ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಪಾದಚಾರಿಗಳ ಸುರಕ್ಷತೆಗೆ ಆದ್ಯತೆ ನೀಡುವುದು ಆಡಳಿತದ ಜವಾಬ್ದಾರಿಯಾಗಿದ್ದು, ನಿಯಮ ಉಲ್ಲಂಘಿಸಿ ಪಾದಚಾರಿ ಮಾರ್ಗವನ್ನು ತಡೆದರೆ ದಂಡ ವಿಧಿಸಲಾಗುತ್ತದೆ. ಎಚ್ಚರಿಕೆಯನ್ನೂ ಮೀರಿ ರಸ್ತೆ ಮೇಲೆ ಸಾಮಾನುಗಳನ್ನು ಹಾಕಿಕೊಂಡರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.


ವರದಿ ✍️ಸೂರಿ ಬಣಕಲ್