ನಯನ ಮೋಟಮ್ಮ ರವರಿಗೆ ಸಚಿವ ಸ್ಥಾನ ನೀಡಿದರೆ ಮೂಡಿಗೆರೆ ಕ್ಷೇತ್ರದಲ್ಲಿ ಪಕ್ಷಕ್ಕೆ ಬಲ :ದೇವರಾಜು ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ


ಮೂಡಿಗೆರೆ ಕ್ಷೇತ್ರದ ಭರವಸೆಯ ಶಾಸಕರಾದ ಶ್ರೀಮತಿ ನಯನ ಮೋಟಮ್ಮ ರವರಿಗೆ ಮಂತ್ರಿಮಂಡಲದಲ್ಲಿ ಅವಕಾಶ ನೀಡಿದರೆ ಪಕ್ಷಕ್ಕೆ ಬಲಬಂದಂತೆ ಎಂದು ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಬ್ಲಿ ದೇವರಾಜ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಒಬ್ಬ ಸಾಮಾನ್ಯ ಕಾರ್ಯಕರ್ತೆಯಾಗಿ ಹಿಡಿ ಕ್ಷೇತ್ರದಾದ್ಯಂತ ತಿರುಗಿ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಭಲವರ್ಧನೆ ಮಾಡಿದ ಸಾಧನೆ ನಯನ ಮೋಟಮ್ಮರವರಿಗೆ ಸಲ್ಲುತ್ತದೆ.

ಕೊರೋನ ಸಮಯದಲ್ಲಿ ಹಿರಿಯ ಕಿರಿಯ ನಾಯಕರುಗಳನ್ನ ಜೊತೆ ಸೇರಿಸಿಕೊಂಡು ಅನಾರೋಗ್ಯ, ವಸತಿ ರಹಿತರು, ನಿವೇಶನ ರಹಿತರು,ಕೂಲಿಕಾರ್ಮಿಕರು, ನಿರ್ಗತಿಕರು, ಹೀಗೆ ಕಂಡುಬಂದ ಹಲವರ ಕಣ್ಣೀರ ಒರೆಸಿ ಧೈರ್ಯ ತುಂಬಿ ಆಹಾರ, ಔಷಧಿ ಕಿಟ್ಟು ವಿತರಿಸಿದ್ದರು.ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಪಕ್ಷ ಬೆಂಬಲಿತರ ಜೊತೆ ನಿಂತು ಗೆಲ್ಲಿಸಿ ಒಬ್ಬ ನಾಯಕಿಯಾಗಿ ಎಲ್ಲರ ಮನೆಮಗಳಾಗಿ 15-20 ವರ್ಷಗಳಿಂದ ಕಾಂಗ್ರೇಸ್ ಮೂಲೆಗುಂಪಾಗಿದೆ ಎಂಬ ಹೇಳಿಕೆಗಳಿಗೆ ಎಳ್ಳು ನೀರು ಬಿಟ್ಟಿದ್ದಾರೆ.

ನಯನ ಮೋಟಮ್ಮ ರವರಿಗೆ ಎಂಎಲ್ಎ ಟಿಕೆಟ್ ನೀಡಿದರೆ ಕಾಂಗ್ರೇಸ್ ಪಕ್ಷ ಧೂಳಿಪಟ ಆಗುತ್ತೆ ಎಂದವರ ಮನವೊಲಿಸಿ ಎಂಎಲ್ಎ ಟಿಕೇಟ್ ತಂದು ಎದುರಾಳಿ ಅಭ್ಯರ್ಥಿಯನ್ನು ಸೋಲಿಸುವವರೇ ಇಲ್ಲ ಎಂದವರ ಬಾಯಿ ಮುಚ್ಚಿಸಿ ಗೆಲುವು ಪಡೆದರು.
ಗೆದ್ದನಂತರ ಇಡೀ ಕ್ಷೇತ್ರದಾದ್ಯಂತ ಇದ್ದ ಜ್ವಲಂತ ಸಮಸ್ಯೆಗಳಲ್ಲಿ ಅತೀ ಮುಖ್ಯವಾದ ರಸ್ತೆ, ಸೇತುವೆ, ಹಕ್ಕುಪತ್ರ, ನೀರು, ಚೆಕ್ ಡ್ಯಾಂ, ಈಗೆ ಕೋಟ್ಯಾಂತರ ರೂಪಾಯಿಯ ಕಾಮಗಾರಿಗಳನ್ನು ಕೇವಲ ಮೂರು ವರ್ಷದಲ್ಲಿಯೇ ಮಾಡಿ ಯುವ ಜನತೆಯ ಆಶಾಕಿರಣವಾಗಿರುವ ನಯನ ಮೋಟಮ್ಮ ರವರಿಗೆ ಸಚಿವಸ್ಥಾನ ನೀಡಬೇಕೆಂದು ಭಾವಿ ಮುಖ್ಯಮಂತ್ರಿಗಳಾದ ಶ್ರೀಯುತ ಡಿ.ಕೆ.ಶಿವಕುಮಾರ್ ಅವರನ್ನು ಮೂಡಿಗೆರೆ ಕ್ಷೇತ್ರದ ಕಾರ್ಯಕರ್ತರ ಪರವಾಗಿ ಕೇಳಿಕೊಳ್ಳುತ್ತೇನೆ
ದೇವರಾಜು ಸಬ್ಲಿ ಮಾಜಿ ತಾಲೂಕು ಪಂಚಾಯತಿ ಸದಸ್ಯರು