2025-26ನೇ ಸಾಲಿನ ಐ. ಸಿ. ಎಸ್. ಇ ಹತ್ತನೇ ತರಗತಿ ಮತ್ತು ಐ. ಎಸ್. ಸಿ 12ನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು ನಜರೆತ್ ಶಾಲೆ, ಬಣಕಲ್ 10ನೇ ತರಗತಿ ಸತತ 14ನೇ ವರ್ಷ ಹಾಗೂ 12ನೇ ತರಗತಿ ಸತತ 2ನೇ ವರ್ಷ ಶೇಕಡಾ 100 ಫಲಿತಾಂಶ ಪಡೆದಿದೆ.
10ನೇ ತರಗತಿಯ 37 ವಿದ್ಯಾರ್ಥಿಗಳು ಹಾಗೂ 12ನೇ ತರಗತಿಯ 6 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಹಾಗೂ ಹತ್ತನೇ ತರಗತಿಯ 24 ವಿದ್ಯಾರ್ಥಿಗಳು ಮತ್ತು 12ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ದೇವವೃಂದದ ರವಿಕುಮಾರ್ ಮತ್ತು ರೂಪಾರವರ ಮಗ ಚಿರಂತ್ ಡಿ ಆರ್ ಶೇಕಡಾ 96 ಅಂಕ ಗಳಿಸಿ ಶಾಲೆಗೆ ಪ್ರಥಮ, ಕೂವೆ ಗ್ರಾಮದ ವರುಣ್ ಡಿಸೋಜಾ ಮತ್ತು ಅನಿತಾ ರೂಪಾ ಡಿಸೋಜಾರವರ ಪುತ್ರ ಆಡನ್ ಡಿಸೋಜ ಶೇ. 95.80 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಹಾಗೂ ತರುವೆ ಗ್ರಾಮದ ಪ್ರಶಾಂತ್ ಮತ್ತು ಸ್ವರೂಪರವರ ಮಗಳು ಲಿಪಿ ಕಾಕೋಡ್ ಶೇ. 89.20 ಅಂಕಗಳೊಂದಿಗೆ ಶಾಲೆಗೆ ತೃತೀಯ ಸ್ಥಾನ ಗಳಿಸಿದ್ದಾರೆ.
12ನೇ ತರಗತಿಯ ವಿಜ್ಞಾನ ವಿಭಾಗದಲ್ಲಿ ಭಾರತಿಬೈಲಿನ ಮಂಜುಪ್ರಸಾದ್ ರವರ ಪುತ್ರಿ ಸಂಜ್ನ್ಯಾ ಶೇ. 88 ಮತ್ತು ವಾಣಿಜ್ಯ ವಿಭಾಗದಲ್ಲಿ ಕೊಟ್ಟಿಗೆಹಾರದ ವೇಣುಗೋಪಾಲ್ ಪೈ ಹಾಗೂ ವರ್ಷಾ ಪೈರವರ ಪುತ್ರ ವೈಭವ್ ವಿ ಪೈ ಶೇ. 87 ಅಂಕಗಳೊಂದಿಗೆ ಶಾಲೆಗೆ ಕೀರ್ತಿ ತಂದಿದ್ದಾರೆಂದು ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಹಿಲ್ಡ ಲೋಬೋ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ