ಬಣಕಲ್ :ಇಂದು ಹುಟ್ಟುಹಬ್ಬಗಳನ್ನು ಅದ್ಧೂರಿಯಾಗಿಯೇ ಆಚರಿಸಿಕೊಳ್ಳುವವರೆ ಹೆಚ್ಚಿರುವಾಗ ಬಣಕಲ್ ಚೇಗೂ ಗ್ರಾಮದ ದಂಪತಿ ತಮ್ಮ ಮಗನ ಹುಟ್ಟು ಹಬ್ಬವನ್ನು ಕಳಸದ ದಿವ್ಯ ಕಾರುಣ್ಯಾಲಯದ ಆಶ್ರಮದಲ್ಲಿ ಇರುವ ನಿರ್ಗತಿಕರೊಂದಿಗೆ ಬೆರೆತು ಅವರಿಗೆ ದಾಸೋಹ ವ್ಯವಸ್ಥೆ ಮಾಡುವ ಮೂಲಕ ಮಾದರಿ ಹುಟ್ಟು ಹಬ್ಬವನ್ನು ಆಚರಿಸಿದರು.
ಇಂದಿನ ಆಧುನಿಕ ಪ್ರಂಪಚದಲ್ಲಿ ಒತ್ತಡಕ್ಕೆ ಇನ್ನು ಯಾವುಧೇ ರೀತಿಯ ವಯಕ್ತಿಕ ಕಾರಣಕ್ಕೋ ಹಲವಾರು ಕೌಟುಂಬಿಕ ಕಲಹದ ಕಾರಣಕ್ಕೋ ಅಪ್ಪ ಅಮ್ಮ ಹಾಗೂ ಇನ್ನೂಳಿದ ಕುಟುಂಬದ ವೃದ್ಧರನ್ನು ವೃದ್ಧಾಶ್ರಮಕ್ಕೆ ಬಿಟ್ಟು ಬೀಡುವ ಮಕ್ಕಳ ನಡುವೆ ಬಣಕಲ್ ನ ಪೆಡ್ಡಿ ಲೋಬೊ ದಂಪತಿ ಎಲ್ಲ ವೃದ್ಧ ಜೀವಗಳಿಗೆ ಸಿಹಿ ನೀಡುವ ಮೂಲಕ ಹಾಗೂ ಅವರಿಗೆ ಅಗತ್ಯ ಮೂಲಭೂತ ವಸ್ತುಗಳನ್ನು ನೀಡುವ ಮೂಲಕ ತಮ್ಮ ಮಗುವಿನ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡು ಮಾನವಿತೇ ಮೆರೆದಿದ್ದಾರೆ.
ವರದಿ :✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ