ಬಣಕಲ್: ವಿಮುಕ್ತಿ ಚಾರಿ ಟೇಬಲ್ ಟ್ರಸ್ಟ್ (ರಿ )ಮತ್ತು ಕ್ರೈಸ್ತ ಅಭಿವೃದ್ಧಿ ಸಂಘ (ರಿ )ಬಣಕಲ್ ವತಿಯಿಂದ ಚರ್ಚ್ ಸಬಾಭವನದಲ್ಲಿ ನಡೆದ ಉಚಿತ ಅರೋಗ್ಯ ತಪಾಸಣೆ ಶಿಬಿರವು ಅತ್ಯಂತ ಯಶಸ್ವಿಯಾಗಿ ಭಾನುವಾರ ನಡೆಯಿತು.
ಬಣಕಲ್ ನಡೆದ ಈ ಶಿಬಿರದಲ್ಲಿ ನೂರಾರು ಜನರು ಭಾಗವಹಿಸಿ ಶುಗರ್ ಇಸಿಜಿ ಹೃದಯ ನರ ರೋಗ ಮೂಳೆ ಕಣ್ಣು ಕಿವಿ ಮೂಗು ಗಂಟಲು ಚಕಪ್ ಸೇವೆಗಳ ಪ್ರಯೋಜನ ಪಡೆದುಕೊಂಡರು
ಜನರ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಲು ಸಹಾಯ ಮಾಡಿದ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲಾ ವೈದ್ಯರು ಸಿಬ್ಬಂದಿಗಳು ಸ್ವಯಂಸೇವಕರು ಹಾಗೂ ಭಾಗವಹಿಸಿದ ಸಾರ್ವಜನಿಕರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಬಣಕಲ್ ಕ್ರೈಸ್ತ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಪೆಡ್ಡಿ ಲೋಬೊ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ವಿಕ್ಟರ್ ಮಾರ್ಟೀಸ್ ಕಾರ್ಯದರ್ಶಿ ವಿನುತಾ ಸೆರಾವೋ ಹಾಗೂ ಸದಸ್ಯರುಗಳಾದ ಪ್ರಶಾಂತಿ ಡಿಸೋಜ ಕ್ರೈಸ್ತ ಅಭಿವೃದ್ಧಿ ಸಂಘದ ನಿರ್ದೇಶಕರಾದ ಹರ್ಷ ಮೇಲ್ವಿನ್ ಲಸ್ರಾದೋ
ಅತಿಕ ಬಾನು ಫಾದರ್ ಥಾಮಸ್ ಕಲಘಟಕಿ ಡಾಕ್ಟರ್ ಸುದೇಶ್
ವಿಮುಕ್ತಿ ಸ್ವಸಾಯ ಸಂಘದ ನಿರ್ದೇಶಕರಾದ ಫಾದರ್ ಅರುಣ್ ಲೋಬೊ ವಿಂದ್ಯಾ ಯೋಗೇಶ್ ಹಾಗೂ ಸಂಘದ ಪದಾಧಿಕಾರಿಗಳು ಹಾಗೂ ಫಾದರ್ ಮುಲ್ಲರ್ ಸಂಸ್ಥೆಯ ವೈದ್ಯಕೀಯ ಸಿಬ್ಬಂದಿ ಇದ್ದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ