ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ನ ಶ್ರೀ ದೇವಿ ಮಹಮ್ಮಾಯಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಗುಳಿಗ ದೈವದ ಕೋಲಾ ನೆಮೋತ್ಸವ ವಿಜೃಂಭಣೆಯಿಂದ ದಿನಾಂಕ 30/3/2026 ರ ಸೋಮವಾರ ನಡೆಯಿತು.
ಕರಾವಳಿ ಮತ್ತು ಮಲೆನಾಡಿನ ಗಡಿಭಾಗದಲ್ಲಿ ಇಂದಿಗೂ ದೈವಗಳ ಮೇಲಿನ ನಂಬಿಕೆ ಎಷ್ಟು ಜೀವಂತವಾಗಿದೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ.
ಕೇವಲ ಸ್ಥಳೀಯರಷ್ಟೇ ಅಲ್ಲ, ಸುತ್ತಮುತ್ತಲಿನ ಊರುಗಳಿಂದ ಸಾವಿರಕ್ಕೂ ಹೆಚ್ಚು ಭಕ್ತರು ತಂಡೋಪತಂಡವಾಗಿ ಬಂದು ಪ್ರಸಾದ ಸ್ವೀಕರಿಸಿದರು. ಇದೆ ಸಂದರ್ಭದಲ್ಲಿ ಭಕ್ತರಿಗಾಗಿ ದಿನೇಶ್ ಶೆಟ್ಟಿ ಮೈಸೂರ್ ಇವರ ವತಿಯಿಂದ ಮದ್ಯಾಹ್ನ ಹಾಗೂ ರಾತ್ರಿ ಅದ್ಧೂರಿ ಅನ್ನಸಂತರ್ಪಣೆ ವ್ಯವಸ್ಥೆಯನ್ನೂ ಏರ್ಪಡಿಸಲಾಗಿತ್ತು. ಸನ್ ಸೈನ್ ಗ್ರೂಪ್ ಮತ್ತು ಮಹಮ್ಮಾಯಿ ಮಹಿಳಾ ಮಂಡಳಿ ಸದಸ್ಯರು ಸ್ವಯಂ ಸೇವಕರಾಗಿ ಪಾಲ್ಗೊಂಡಿದ್ದರು.
ದೈವಗಳ ಮೇಲಿನ ಅಚಲ ನಂಬಿಕೆಯಿಂದ ನಡೆಯುವ ಇಂತಹ ಆಚರಣೆಗಳು ನಮ್ಮ ಮಣ್ಣಿನ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಸಾರುತ್ತಿವೆ. ಗುಳಿಗ ದೈವದ ನೇಮೋತ್ಸವ ಭಕ್ತರ ಮನದಲ್ಲಿ ದೈವಿಕ ಸಂಚಲನ ಮೂಡಿಸಿದೆ.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ