ಬಣಕಲ್ : ಪೊಲೀಸ್ ಠಾಣೆ ಎಂದರೆ ಸ್ವಲ್ಪ ಹಿಂದೇಟು ಹಾಕುವ ಸಾಮಾನ್ಯ ಜನರಿಗೂ ಅತ್ಯಂತ ಆಪ್ತರಾಗಿದ್ದ ಬಣಕಲ್ ನ ನೆಚ್ಚಿನ ‘ಜನಸ್ನೇಹಿ’ ಪೊಲೀಸ್ ಅಧಿಕಾರಿ, ಬಣಕಲ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (PSI) ರೇಣುಕಾ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಕಳೆದ ಎರಡು ವರ್ಷಗಳಿಂದ ನಗರದಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದ ಇವರು ಇದೀಗ ವರ್ಗಾವಣೆಯಾಗಿದ್ದಾರೆ.
ಜನಸ್ನೇಹಿ ಅಧಿಕಾರಿಯ ದಕ್ಷ ಆಡಳಿತ:
ರೇಣುಕಾ ಅವರು ಬಣಕಲ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಠಾಣೆ ಮೆಟ್ಟಿಲೇರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿದ್ದ ಇವರು, ಅವರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದ್ದರು.
ಸೂಕ್ಷ್ಮ ಕಾರ್ಯಕ್ರಮಗಳಿಗೆ ಯಶಸ್ವಿ ಭದ್ರತೆ:
ಬಣಕಲ್ ಠಾಣಾ ಸರಹದ್ದಿನಲ್ಲಿ ನಡೆಯುವ ಗಣಪತಿ ವಿಸರ್ಜನಾ ಮೆರವಣಿಗೆ, ಈದ್ ಮಿಲಾದ್ ಮೆರವಣಿಗೆ ಜಾತ್ರಾ ಉತ್ಸವಗಳು ಹೀಗೆ ಬಣಕಲ್ ನಲ್ಲಿ ನಡೆದ ಹಲವು ಕಾರ್ಯಕ್ರಮಗಳ ಯಶಸ್ಸಿನಲ್ಲಿ ಪಿಎಸ್‌ಐ ರೇಣುಕಾ ಅವರ ಶ್ರಮ ಅಪಾರ. ಅಚ್ಚುಕಟ್ಟಾದ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಇವರ ಪಾತ್ರ ಅತ್ಯಂತ ಪ್ರಮುಖವಾಗಿತ್ತು. ಹಗಲು-ರಾತ್ರಿ ಎನ್ನದೆ ಪೊಲೀಸ್ ಸಿಬ್ಬಂದಿಯನ್ನು ಸಮನ್ವಯಗೊಳಿಸಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾರ್ಯನಿರ್ವಹಿಸಿದ್ದರು.
ಜನಸ್ನೇಹಿ ಗುಣಗಳ ಮೂಲಕ ಮನಗೆದ್ದಿದ್ದ ರೇಣುಕಾ ಅವರ ಮುಂದಿನ ವೃತ್ತಿಜೀವನ ಇನ್ನಷ್ಟು ಯಶಸ್ವಿಯಾಗಲಿ ಎಂದು ಬಣಕಲ್ ನ್ಯೂಸ್ ತಂಡ ಹಾಗೂ ಸಾರ್ವಜನಿಕರು ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಉನ್ನತ ಹುದ್ದೆ ಹಾಗೂ ಸ್ಥಾನಮಾನದೊಂದಿಗೆ ಮರಳಿ ನಮ್ಮ ತಾಲೂಕ್ಕಿಗೆ ಬರಲಿ ಎನ್ನುವುದು ಬಣಕಲ್ ಗ್ರಾಮಸ್ಥರ ಒಕ್ಕೊರಲಿನ ಆಶಯವಾಗಿದೆ.
ಸನ್ಮಾನ ಮಾಡಿದ ಸಂದರ್ಭದಲ್ಲಿ ಬಣಕಲ್ ನ್ಯೂಸ್ ತಂಡದ ಸದಸ್ಯರಾದ ಸೂರಿ, ಅರುಣ್ ಪೂಜಾರಿ, ರಂಗನಾಥ್,,ಆಟೋ ಚಾಲಕರದ ಹರೀಶ್,ಕೀರ್ತಿ, ಗಣೇಶ್, ಶಶಿ,ನವೀನ್ ಇದ್ದರು.
ವರದಿ: ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ