ದ್ವಿಚಕ್ರ ವಾಹನದ ಎಂಜಿನ್ ಒಳಗೆ ಅವಿತಿದ್ದ ನಾಗರ ಹಾವು ಸೆರೆ

ಬಣಕಲ್ :ದ್ವಿಚಕ್ರ ವಾಹನದ ಎಂಜಿನ್ ಒಳಗೆ ನಾಗರಹಾವೊಂದು ಅವಿತು ಕುಳಿತ್ತಿದ್ದ ದೃಶ್ಯ ಕಂಡು ಬಂದಿದೆ.

ಬಣಕಲ್ ನ ಕರ್ನಾಟಕ ಬ್ಯಾಂಕ್ ಉದ್ಯೋಗಿ ಸಚಿನ್ ಎಂಬುವವರ, ವಾಹನದ ಎಂಜಿನ್ ಒಳಗೆ ನಾಗರಹಾವು ಅವಿತು ಕುಳಿತ ದೃಶ್ಯ ಕಂಡು ಬಂದಿದೆ .ರಸ್ತೆಯಲ್ಲಿ ಹೋಗುತ್ತಿದ್ದ ನಾಗರಹಾವು ಜನರನ್ನು ಕಂಡು ತಕ್ಷಣ ಅಲ್ಲೇ ಇದ್ದ ಬೈಕ್ ನಲ್ಲಿ ಅಡಗಿ ಕುಳಿತ್ತಿದೆ. ಇದನ್ನು ಕಂಡ ಸಾರ್ವಜನಿಕರು ಬೈಕ್ ಮಾಲೀಕ ಸಚಿನ್ ಅವರಿಗೆ ವಿಷಯಮುಟ್ಟಿಸಿದ್ದಾರೆ.

ಹಾವನ್ನು ಕಂಡ ತಕ್ಷಣ ಉರಗ ರಕ್ಷಕ ಆರಿಫ್ ಅವರನ್ನು ಸಂಪರ್ಕಿಸಿದ್ದಾರೆ. ವಿಷಯ ತಿಳಿದ ಆರಿಫ್ ಕೂಡಲೇ ಸ್ಥಳಕ್ಕೆ ಆಗಮಿಸಿ ಎಂಜಿನ್ ನಲ್ಲಿ ಅಡಗಿದ್ದ ಹಾವನ್ನು ರಕ್ಷಿಸಿದ್ದಾರೆ.