ಧರ್ಮಸ್ಥಳ ಪಾದಯಾತ್ರಿಗಳಿಗೆ ಉಪಹಾರದ ವ್ಯವಸ್ಥೆ ಮಾಡುವುದು ಪುಣ್ಯದ ಕೆಲಸ :ಗುಡ್ಡೆಮಠ ಸುಧಾಕರ್

ಬಣಕಲ್ :ಪಾದಯಾತ್ರಿಗಳಿಗೆ ಅನ್ನದಾನವು ಪವಿತ್ರ ಕಾರ್ಯವಾಗಿದ್ದು, ಧರ್ಮಸ್ಥಳ ಪುಣ್ಯಕ್ಷೇತ್ರಕ್ಕೆ ತೆರಳುವ ಪಾದಯಾತ್ರೆ ಕೈಗೊಂಡ ಸಾವಿರಾರು ಸಂಖ್ಯೆಯ ಭಕ್ತರಿಗೆ ಬೆಳಗ್ಗಿನ ಉಪಹಾರ ಮದ್ಯಾಹ್ನ ಹಾಗೂ ರಾತ್ರಿಯ ಆಹಾರವನ್ನು ವ್ಯವಸ್ಥೆ ಮಾಡುವುದರ ಮೂಲಕ ಬಸನಿ ಗುಡ್ಡೆಮಠ ಎಸ್ಟೇಟ್ ನ ಮಾಲೀಕರಾದ ಬಿ.ಎಸ್. ಸುಧಾಕರ್ ಮತ್ತು ಕುಟುಂಬ ವರ್ಗದವರ ಕಾರ್ಯಕ್ಕೆ ಶ್ಲಾಘನೇ ವ್ಯಕ್ತವಾಗಿದೆ.

ಬಣಕಲ್ ನ್ಯೂಸ್ ನೊಂದಿಗೆ ಮಾತನಾಡಿದ ಸುಧಾಕರ್ ಗೌಡರು ಭಕ್ತರು ಪಾದಯಾತ್ರೆಯಲ್ಲಿ ದಣಿದು ಬರುವಾಗ, ಇಂತಹ ಅನ್ನದಾಸೋಹಗಳು ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಒದಗಿಸಲು ಸಹಕರಿಯಾಗಿತ್ತದೆ. ಸೇವೆ ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ . ಭಕ್ತರಿಗೆ ಉಪಹಾರದ ವ್ಯವಸ್ಥೆ ಮಾಡುವುದು ಪುಣ್ಯದ ಕೆಲಸ ಈ ಒಂದು ಪುಣ್ಯದ ಕೆಲಸ ಮಾಡಲು ದೇವರು ನಮ್ಮ ಕುಟುಂಬಕ್ಕೆ ಅವಕಾಶ ಕೊಟ್ಟಿದ್ದಾನೆ. ಹಸಿದು ಬಂದ ಭಕ್ತಾದಿಗಳಿಗೆ ಅನ್ನದಾನ ಮಾಡಿರುವುದು ನಮಗೆ ತೃಪ್ತಿ ತಂದಿದೆ ಎಂದರು.
ಬೆಳಗ್ಗೆ 6ಗಂಟೆಗೆ ಪ್ರಾರಂಭಗೊಂಡು ರಾತ್ರಿ 10ಗಂಟೆವರೆಗೂ ಉಪಹಾರ ವ್ಯವಸ್ಥೆ ಮಾಡಿಸಿದ್ದರು. ದಣಿದು ಬಂದವರಿಗೆ ಕುಡಿಯಲು ನೀರು ಹಾಗೂ ವಿಶ್ರಾಂತಿ ಪಡೆಯಲು ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಅಂದಾಜು 10000ಸಾವಿರ ಪಾದಯಾತ್ರಿಗಳು ಉಪಹಾರ ಮಾಡಿದ್ದಾರೆ . ಗುಡ್ಡೆಮಠ ಸುಧಾಕರ್ ಕುಟುಂಬದ ನಿಸ್ವಾರ್ಥ ಸೇವೆಗೆ ಪಾದಯಾತ್ರಿಗಳು ಹಾಗೂ ಬಣಕಲ್ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ವರದಿ ✍️ಸೂರಿ ಬಣಕಲ್