ಸಬ್ಲಿ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆದ ಕಾರ್ತಿಕ ದೀಪೋತ್ಸವ

ಬಣಕಲ್: ಇತಿಹಾಸ ಪ್ರಸಿದ್ಧ ಅನ್ನಪೂರ್ಣೆ ಸ್ವರೂಪಿ ಸಬ್ಲಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಶುಕ್ರವಾರ ದಂದು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮದ ನಡುವೆ ವಿಜೃಂಭಣೆಯಿಂದ ವಾರ್ಷಿಕ ಪೂಜೆ ಮತ್ತು ಕಾರ್ತಿಕ ದೀಪೋತ್ಸವ ನಡೆಯಿತು ಬಣಕಲ್ ನ ಮುಖ್ಯರಸ್ತೆಯಿಂದ ದೇವಸ್ಥಾನದ ವರೆಗೆ ವಿಧ್ಯುತ್ ದೀಪದಿಂದ ಅಲಂಕೃತಗೊಳಿಸಲಾಗಿತ್ತು.
ದೇವಸ್ಥಾನದ ಸುತ್ತ ಎಣ್ಣೆ ಹಣತೆಯ ದೀಪಗಳು ಕಂಗೊಳಿಸುತ್ತಿತ್ತು. ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು ಆಗಮಿಸಿ ದರ್ಶನ ಪಡೆದರು.

ಬಣಕಲ್ ಹೋಬಳಿ ಕಾಂಗ್ರೇಸ್ ಅಧ್ಯಕ್ಷರಾದ ತ್ರಿಪುರ ಸುಬ್ರಮಣ್ಯ, ಗ್ರಾಮ ಪಂಚಾಯತಿ ಸದಸ್ಯರಾದ ಮಧು, ವಿನಯ್ ಕುಮಾರ್, ಝಕಾರಿಯ,ದೇವರಾಜು ಸಬ್ಲಿ, ಪರಮೇಶ್, ಹಾಲಯ್ಯ,ಚಂದ್ರಯ್ಯ, ಚಂದ್ರಪ್ಪ,ಮಂಜಯ್ಯ,ಪ್ರತಾಪ್,ಹರೀಶ್,ರವಿ, ಮುಳ್ಳಯ್ಯ,ರವೀಂದ್ರ, ಅವಿನಾಶ್,ಯೋಗೀಶ್,ಬಸವರಾಜ್, ಬಿಳಿಯಪ್ಪ, ಮುದ್ದಪ್ಪ, ಮಿಲ್ಟ್ರಿ ಲಕ್ಷ್ಮಣ್,ಮುಂತಾದವರು ಬಾಗಿಯಾಗಿದ್ದರು ಸೇರಿದ್ದ ಎಲ್ಲಾ ಭಕ್ತಾದಿಗಳಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು


ವರದಿ ✍️ಸೂರಿ ಬಣಕಲ್